ನವದೆಹಲಿ: ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಯಾವಾಗ ಉಚಿತವಾಗಿ ಕೋವಿಡ್ 19 ವಿರುದ್ಧದ ಲಸಿಕೆ ದೊರೆಯಲಿದೆ ಎಂದು ಶುಕ್ರವಾರ ನಡೆಯುವ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸುವ ವಿಶ್ವಾಸ ಇದೆ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದಲ್ಲಿರುವ ಕೋವಿಡ್ 19 ಸಾಂಕ್ರಾಮಿಕದ ಸ್ಥಿತಿಗತಿ ಹಾಗೂ ಲಸಿಕೆ ಪೂರೈಕೆಗೆ ಎದುರಾಗುವ ಸವಾಲುಗಳ ಕುರಿತು ಚರ್ಚಿಸಲು ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.
‘ಇವತ್ತಿನ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿವಯರು ದೇಶದ ಪ್ರತಿ ನಾಗರಿಕನಿಗೂ ಯಾವಾಗ ಉಚಿತವಾಗಿ ಕೋವಿಡ್ 19 ವಿರುದ್ಧದ ಲಸಿಕೆ ಸಿಗುತ್ತದೆ ಎಂದು ಸ್ಪಷ್ಟಪಡಿಸಲಿದ್ದಾರೆ‘ ಎಂದು ರಾಹುಲ್ ಪೋಸ್ಟ್ ಮಾಡಿದ್ದಾರೆ.
ವರ್ಚವಲ್ ಆಗಿ ನಡೆಯಲಿರುವ ಈ ಸರ್ವ ಪಕ್ಷಗಳ ಸಭೆಗೆ ಸಂಸತ್ತಿನ ಎಲ್ಲ ಪಕ್ಷಗಳನ್ನು ಸರ್ಕಾರ ಆಹ್ವಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.