ADVERTISEMENT

4 ರಾಜ್ಯಗಳ 5 ವಿಧಾನಸಭಾ ಸ್ಥಾನಗಳಿಗೆ ಜೂನ್ 19ಕ್ಕೆ ಉಪಚುನಾವಣೆ, 23ಕ್ಕೆ ಫಲಿತಾಂಶ

ಪಿಟಿಐ
Published 25 ಮೇ 2025, 5:07 IST
Last Updated 25 ಮೇ 2025, 5:07 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಜೂನ್ 19ಕ್ಕೆ ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.

ADVERTISEMENT

ಗುಜರಾತ್‌ನ ಎರಡು ಮತ್ತು ಕೇರಳ, ಪಂಜಾಬ್ ಹಾಗೂ ಪಶ್ಚಿಮ ಬಂಗಳಾದ ತಲಾ ಒಂದು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.

ಜೂನ್ 19ಕ್ಕೆ ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ನಾಮಪತ್ರ ಸಲ್ಲಿಸಲು ಜೂನ್ 2ರಂದು ಕೊನೆಯ ದಿನಾಂಕವಾಗಿದ್ದು, ಜೂನ್ 3ರಂದು ನಾಮನಿರ್ದೇಶನಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜೂನ್ 5 ಕೊನೆಯ ದಿನಾಂಕವಾಗಿದೆ.

ಯಾವೆಲ್ಲ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ?

  • ಗುಜರಾತ್: ಕಢಿ ಮತ್ತು ವಿಸಾವದರ್

  • ಕೇರಳ: ನಿಲಂಬೂರ್

  • ಪಂಜಾಬ್: ಲೂಧಿಯಾನ ಪಶ್ಚಿಮ

  • ಪಶ್ಚಿಮ ಬಂಗಾಳ: ಕಾಳಿಗಂಜ್

ಗುಜರಾತ್‌ನ ಕಢಿ ಕ್ಷೇತ್ರದಲ್ಲಿ ಶಾಸವ ಕರಸಾನ್‌ಭಾಯ್ ಸೋಲಂಕಿ ನಿಧನದಿಂದಾಗಿ ಉಪಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಭಯಾನಿ ಭೂಪೇಂದ್ರಭಾಯ್ ಗಂಡೂಭಾಯ್ ರಾಜೀನಾಮೆ ಬಳಿಕ ತೆರವಾದ ವಿಸಾವದರ್ ಕ್ಷೇತ್ರದಲ್ಲಿ ಚುನಾವಣೆ ನಿಗದಿಯಾಗಿದೆ.

ಕೇರಳದ ನಿಲಂಬೂರ್‌ನಲ್ಲಿ ಪಿ.ವಿ. ಅನ್ವರ್ ರಾಜೀನಾಮೆ ಸಲ್ಲಿಸಿದ್ದರು. ಪಂಜಾಬ್‌ನ ಲೂಧಿಯಾನ ಪಶ್ಚಿಮದಲ್ಲಿ ಗುರುಪ್ರೀತ್ ಬಸ್ಸಿ ಗೋಗಿ ಹಾಗೂ ಪಶ್ಚಿಮ ಬಂಗಾಳದ ಕಾಲಿಗಂಜ್‌ನಲ್ಲಿ ನಾಸಿರುದ್ದೀನ್ ಅಹಮ್ಮದ್ ನಿಧನದಿಂದಾಗಿ ಉಪಚುನಾವಣೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.