ADVERTISEMENT

ಲೋಕಸಭೆಯ ಮೂರು, ವಿಧಾನಸಭೆಗಳ 30 ಕ್ಷೇತ್ರಗಳಿಗೆ ಅ.30ಕ್ಕೆ ಉಪಚುನಾವಣೆ

ಪಿಟಿಐ
Published 28 ಸೆಪ್ಟೆಂಬರ್ 2021, 5:55 IST
Last Updated 28 ಸೆಪ್ಟೆಂಬರ್ 2021, 5:55 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ಲೋಕಸಭೆಯ ಮೂರು ಕ್ಷೇತ್ರಗಳು ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಯ 30 ಕ್ಷೇತ್ರಗಳಿಗೆ ಅಕ್ಟೋಬರ್‌ 30ರಂದು ಉಪಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗವು ಮಂಗಳವಾರ ಈ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಮತ ಎಣಿಕೆ ಪ್ರಕ್ರಿಯೆಯು ನವೆಂಬರ್‌ 2ರಂದು ನಡೆಯಲಿದೆ ಎಂದು ತಿಳಿಸಿದೆ.

ಕೋವಿಡ್‌ ಪರಿಸ್ಥಿತಿ, ಪ್ರವಾಸ, ಹಬ್ಬಗಳ ಋತು, ಕೆಲ ಭಾಗಗಳಲ್ಲಿನ ಚಳಿಗಾಲದ ಅವಧಿ ಎಲ್ಲವನ್ನು ಪರಿಗಣಿಸಲಾಗಿದೆ. ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆಯನ್ನೂ ಆಯೋಗ ಪಡೆದಿದೆ ಎಂದು ಹೇಳಿದೆ.

ADVERTISEMENT

ದಾದರ್‌ & ನಗರ್‌ಹವೇಲಿ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ತಲಾ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಆಯೋಗದ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.