ADVERTISEMENT

ಭಾರತಕ್ಕೆ ’ಜಿ–20‘ ಅಧ್ಯಕ್ಷ ಸ್ಥಾನ: ಸಚಿವಾಲಯ ಸ್ಥಾಪನೆಗೆ ಅಸ್ತು

ಪಿಟಿಐ
Published 15 ಫೆಬ್ರುವರಿ 2022, 16:15 IST
Last Updated 15 ಫೆಬ್ರುವರಿ 2022, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ ‘ಜಿ–20’ ಯ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳಿಗೆ ಸಂಬಂಧಿಸಿ ಸಚಿವಾಲಯ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿತು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟದ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

20 ರಾಷ್ಟ್ರಗಳ ಸಂಘಟನೆಯಾದ ‘ಜಿ–20’ ಅಧ್ಯಕ್ಷ ಸ್ಥಾನವನ್ನು ಇದೇ ವರ್ಷ ಡಿಸೆಂಬರ್‌ 1ರಂದು ಭಾರತ ಅಲಂಕರಿಸಲಿದ್ದು, 2023ರ ನವೆಂಬರ್‌ 30ರ ವರೆಗೆ ಅಧಿಕಾರಾವಧಿ ಇರಲಿದೆ. ಮುಂದಿನ ವರ್ಷ ಭಾರತವು ಜಿ–20 ಶೃಂಗಸಭೆಯನ್ನು ಆಯೋಜಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.