ADVERTISEMENT

ವರ್ಷದಲ್ಲಿ ಮೂರು ಬಾರಿ ಸಿ.ಎ. ಅಂತಿಮ ಪರೀಕ್ಷೆ: ಐಸಿಎಐ

ಪಿಟಿಐ
Published 27 ಮಾರ್ಚ್ 2025, 16:12 IST
Last Updated 27 ಮಾರ್ಚ್ 2025, 16:12 IST
   

ನವದೆಹಲಿ: ಪ್ರಸಕ್ತ ವರ್ಷದಿಂದ ಚಾರ್ಟರ್ಡ್‌ ಅಕೌಂಟೆಂಟ್ಸ್‌ (ಸಿ.ಎ) ಅಂತಿಮ ಪರೀಕ್ಷೆಗಳನ್ನು ವರ್ಷದಲ್ಲಿ ಮೂರು ಬಾರಿ ನಡೆಸಲಾಗುತ್ತದೆ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ (ಐಸಿಎಐ) ಗುರುವಾರ ಹೇಳಿದೆ.

ಸದ್ಯ, ಈ ಪರೀಕ್ಷೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತಿತ್ತು.

‘ಲೆಕ್ಕ ಪರಿಶೋಧನೆ ಕ್ಷೇತ್ರದಲ್ಲಿ ಜಾಗತಿಕವಾಗಿ ಅನುಸರಿಸಲಾಗುತ್ತಿರುವ ವಿಧಾನಗಳ ಅಳವಡಿಕೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಐಸಿಎಐ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.