
ಪ್ರಜಾವಾಣಿ ವಾರ್ತೆ
ನವದೆಹಲಿ: ಕಳೆದ 11 ವರ್ಷಗಳಿಂದ (2014–2025) ಕೇಂದ್ರೀಯ ಅರೆ ಸೇನಾ ಪಡೆಯ (ಸಿಎಪಿಎಫ್) ಒಟ್ಟು ಏಳು ವಿಭಾಗಗಳಲ್ಲಿ ರಾಜೀನಾಮೆ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಲ್ಲಿ ಈ ಸಂಖ್ಯೆ ಗಮನಾರ್ಹ ಏರಿಕೆ ಕಂಡಿದೆ. ಏಳು ವಿಭಾಗಗಳೂ ಸೇರಿ ಇಷ್ಟೂ ವರ್ಷಗಳಲ್ಲಿ 23,360 ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಎನ್‌ಎಸ್‌ಜಿಯಲ್ಲಿ ಮಾತ್ರವೇ 11 ವರ್ಷಗಳಲ್ಲಿ ಒಬ್ಬ ಸಿಬ್ಬಂದಿಯೂ ರಾಜೀನಾಮೆ ನೀಡಿಲ್ಲ. ಆತ್ಮಹತ್ಯೆ ಪ್ರಕರಣಗಳಲ್ಲಿ, ಸಹೋದ್ಯೋಗಿಗಳನ್ನೇ ಹತ್ಯೆ ಮಾಡುವುದರಲ್ಲಿಯೂ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಡಿಸೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶನಲ್ಲಿ ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯವು ಲಿಖಿತ ಉತ್ತರ ನೀಡಿದೆ. ಉತ್ತರದ ಮಾಹಿತಿ ಇಲ್ಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.