ADVERTISEMENT

ಮುಂಬೈ: ಜಾಮೀನಿನ ಹಣ ಅನಾಥಾಲಯಕ್ಕೆ ನೀಡಲು ಮುಂಬೈ ಕೋರ್ಟ್ ಸೂಚನೆ

ಏಜೆನ್ಸೀಸ್
Published 25 ಮಾರ್ಚ್ 2019, 10:14 IST
Last Updated 25 ಮಾರ್ಚ್ 2019, 10:14 IST
   

ಮುಂಬೈ: ಇಲ್ಲಿನ ಬಾರ್ ಡಾನ್ಸರ್‌ಗಳ ಮೇಲೆ ಹಣ ಸುರಿಯುತ್ತಿದ್ದ ಆರೋಪದಡಿಬಂಧಿತರಾಗಿರುವ 47 ಮಂದಿ ತಮ್ಮ ಜಾಮೀನು ಹಣವನ್ನು ಅನಾಥಾಲಯಗಳಿಗೆ ದಾನ ನೀಡಬೇಕೆಂದು ಮುಂಬೈ ಕೋರ್ಟ್ ಸೂಚನೆ ನೀಡಿದೆ.

ಪ್ರತಿಆರೋಪಿಯು ಜಾಮೀನಿನ ಮೊತ್ತ ತಲಾ ₹3 ಸಾವಿರ ಸೇರಿದಂತೆ ₹1 ಲಕ್ಷ 41 ಸಾವಿರ ಹಣವನ್ನು ಬದ್ಲಾಪುರದಲ್ಲಿರುವ ಸತ್ಕರ್ಮ ಬಾಲಕಾಶ್ರಮಗಳಿಗೆ ಸಲ್ಲಿಸಲು ಕೋರ್ಟ್ ಹೇಳಿದೆ. ಈ ಮೊದಲು ಜಾಮೀನಿನ ಹಣ ರಾಜ್ಯದ ಬೊಕ್ಕಸ ಸೇರುತ್ತಿತ್ತು.

ಆರೋಪಿಗಳನ್ನು ಒಂದು ದಿನ ಜೈಲಿನಲ್ಲಿರಿಸಿ.ಕುಟುಂಬಗಳಿಗೆ ಇವರು ಮಾಡಿರುವ ತಪ್ಪುಗಳು ತಿಳಿಯಲಿ ಎಂದು ನ್ಯಾಯಾಧೀಶರು ಆರೋಪಿಗಳ ಪರ ವಕೀಲರಿಗೆ ತಿಳಿಸಿದರು.

ADVERTISEMENT

ಮುಂಬೈ ಬಳಿಯ ತಾರ್ದಿಯೊದಲ್ಲಿರುವ ಇಂಡಿಯಾನಾ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿಡಾನ್ಸರ್‌ಗಳ ಮೇಲೆ ಹಣ ಸುರಿಯುತ್ತಿದ್ದ 47 ಮಂದಿಯನ್ನು ಭಾನುವಾರ ಪೊಲೀಸರುವಶಕ್ಕೆ ತೆಗೆದುಕೊಂಡಿದ್ದರು.ಬಂಧಿತರಲ್ಲಿಬಾರ್‌ನ ವ್ಯವಸ್ಥಾಪಕ, ಸಿಬ್ಬಂದಿ,ಗ್ರಾಹಕರು, ಸ್ಥಳೀಯರಿದ್ದುಇವರಲ್ಲಿ ಕೆಲವರು ಗುಜರಾತ್, ಮಧ್ಯಪ್ರದೇಶದವರು.

ಬಂಧಿತರ ಪರ ವಕೀಲರು, ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಮ್ಯಾಜಿಸ್ಟ್ರೇಟರ್‌ ಬಳಿ ಮನವಿ ಮಾಡಿದ್ದರು. ಆದರೆ ಮ್ಯಾಜಿಸ್ಟ್ರೇಟರ್‌ ಜೈಲುವಾಸ ಶಿಕ್ಷೆ ವಿಧಿಸಿದ್ದರು.

ಮ್ಯಾಜಿಸ್ಟ್ರೇಟ್ ಮಲ್ಲಿಕ್ ಮತ್ತು ವಕೀಲರು ಸೇರಿ ಜಾಮೀನಿನ ಹಣ ಉತ್ತಮ ಕಾರ್ಯಕ್ಕೆ ಉಪಯೋಗವಾಗುವ ಕುರಿತು ಚರ್ಚಿಸಿದಾಗ, ಆ ಹಣವನ್ನು ಅನಾಥಾಲಯ ಅಥವಾ ಎನ್‌ಜಿಒಗಳಿಗೆ ನೀಡಬೇಕೆಂದು ತೀರ್ಮಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.