ADVERTISEMENT

ಗೂಢಚಾರಿಕೆ ಪ್ರಕರಣ: ಹವ್ಯಾಸಿ ಪತ್ರಕರ್ತ, ಮಾಜಿ ನೌಕಾ ಕಮಾಂಡರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮೇ 2023, 13:42 IST
Last Updated 17 ಮೇ 2023, 13:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಿದೇಶಿ ಗುಪ್ತಚರ ಸಂಸ್ಥೆಗಳಿಗೆ ರವಾನಿಸಿದ ಆರೋಪದ ಮೇಲೆ ನೌಕಾಪಡೆಯ ಮಾಜಿ ಕಮಾಂಡರ್ ಮತ್ತು ಹವ್ಯಾಸಿ ಪತ್ರಕರ್ತರೊಬ್ಬರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ನೌಕಾಪಡೆಯ ಮಾಜಿ ಕಮಾಂಡರ್ ಆಶಿಶ್ ಪಾಠಕ್ ಮತ್ತು ಹವ್ಯಾಸಿ ಪತ್ರಕರ್ತ ವಿವೇಕ್‌ ರಘುವಂಶಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3 (ಗೂಢಚಾರಿಕೆ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿವೇಕ್ ರಘುವಂಶಿ ವಿರುದ್ಧ ಎಫ್ ಐಆರ್ ದಾಖಲಾದ ನಂತರ, ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಸಿಬಿಐ ಮಂಗಳವಾರ ದಾಳಿ ನಡೆಸಿತು.

ಈ ಹವ್ಯಾಸಿ ಪತ್ರಕರ್ತ ಅಮೆರಿಕದ ವೆಬ್‌ಸೈಟ್‌ನಲ್ಲಿ ರಕ್ಷಣಾ ಮತ್ತು ಕಾರ್ಯತಂತ್ರ ವ್ಯವಹಾರಗಳ ಕುರಿತ ಪೋರ್ಟಲ್‌ಗೆ ಭಾರತೀಯ ಪ್ರತಿನಿಧಿಯಾಗಿದ್ದರು. ಇವರಿಗೆ ಹತ್ತಿರದ ನಂಟಿರುವವರ ವ್ಯಕ್ತಿಗಳಿಗೆ ಸೇರಿದ ಜೈಪುರ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) 12 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಶೋಧನೆಯಲ್ಲಿ ಹಲವು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.