ADVERTISEMENT

ಲಂಚ ಹಗರಣ: ಸಿಬಿಐ ಡಿಎಸ್‌ಪಿ ಬಂಧನ

ಪಿಟಿಐ
Published 20 ಜನವರಿ 2021, 14:52 IST
Last Updated 20 ಜನವರಿ 2021, 14:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಿಬಿಐ ಸಂಸ್ಥೆಯೊಳಗೇ ಲಂಚದ ಹಗರಣಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಕೆ.ರಿಶಿ, ಇನ್‌ಸ್ಪೆಕ್ಟರ್‌ ಕಪಿಲ್‌ ಧನ್‌ಕಡ್‌ ಹಾಗೂ ವಕೀಲರೊಬ್ಬರನ್ನು ಸಿಬಿಐ ಬಂಧಿಸಿದೆ.

ಆರೋಪಿಗಳು, ₹4300 ಕೋಟಿ ಮೌಲ್ಯದ ಬ್ಯಾಂಕ್‌ ಸಾಲವನ್ನು ಪಡೆದು ಅನ್ಯ ಕಾರ್ಯಕ್ಕೆ ವಿನಿಯೋಗಿಸಿದ ಕಂಪನಿಗಳಿಂದ ಲಂಚ ಪಡೆದು ಅವರಿಗೆ ಸಹಾಯ ಮಾಡುತ್ತಿದ್ದರು.

ಉತ್ತರ ಪ್ರದೇಶದ ಸಹರಾನ್‌ಪುರ್‌ ಜಿಲ್ಲೆಯಲ್ಲಿರುವ ರಿಶಿ ಅವರ ನಿವಾಸದಲ್ಲೂ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದು, ರೂರ್ಕಿಯಲ್ಲಿರುವ ಅವರ ಪತ್ನಿಯ ಮನೆಯಲ್ಲೂ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.