ADVERTISEMENT

‘ಫೋಟೊ ಡಿಎನ್‌ಎ’ ತಂತ್ರಜ್ಞಾನ ಅಳವಡಿಸಿ: ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಸಿಬಿಐ

ಶಂಕಿತರ ಮೇಲೆ ನಿಗಾಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 7:11 IST
Last Updated 31 ಡಿಸೆಂಬರ್ 2018, 7:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಅಪರಾಧ, ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆಪ್ರಕರಣಗಳ ತನಿಖೆ ಮತ್ತು ಶಂಕಿತರ ಮೇಲೆ ನಿಗಾ ಇಡುವುದಕ್ಕಾಗಿ ‘ಫೋಟೊ ಡಿಎನ್‌ಎ’ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಎಲ್ಲ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಿಬಿಐ ಸೂಚಿಸಿದೆ.

ಕಣ್ಗಾವಲು ಮತ್ತು ಖಾಸಗಿತನದ ಹಕ್ಕುಗಳ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಸಿಬಿಐ ಈ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿತಾಣ ವರದಿ ಮಾಡಿದೆ.‘ಫೋಟೊ ಡಿಎನ್‌ಎ’ಯು ಮೈಕ್ರೋಸಾಫ್ಟ್‌ ಅಭಿವೃದ್ಧಿಪಡಿಸಿದ ತಂತ್ರಜ್ಞಾನವಾಗಿದ್ದು,ಮಕ್ಕಳ ಮೇಲಿನ ಶೋಷಣೆಯ ಚಿತ್ರಗಳನ್ನು ಪತ್ತೆ ಮಾಡಲು ಮುಖ್ಯವಾಗಿ ಬಳಕೆಯಲ್ಲಿದೆ.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 91ರ ಅನ್ವಯ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಿಬಿಐ ನೊಟೀಸ್ ನೀಡಿದೆ. ಅದರಲ್ಲಿ ಕೆಲವು ಫೋಟೊಗಳನ್ನೂ ಲಗತ್ತಿಸಿದೆ. ‘ತನಿಖೆಯ ಉದ್ದೇಶಕ್ಕಾಗಿ ಮತ್ತು ಈ ನೋಟಿಸ್‌ನಲ್ಲಿ ಲಗತ್ತಿಸಲಾಗಿರುವ ಫೋಟೊಗಳಲ್ಲಿರುವವರ ಮೇಲೆ ನಿಗಾ ಇಡುವುದಕ್ಕಾಗಿನೀವುಫೋಟೊ ಡಿಎನ್‌ಎ ತಂತ್ರಜ್ಞಾನ ಅಳವಡಿಸಬೇಕು. ತನಿಖೆಗಾಗಿ ಇದನ್ನು ಶೀಘ್ರ ಅನುಷ್ಠಾನಗೊಳಿಸಬೇಕು’ ಎಂದು ನೋಟಿಸ್‌ನಲ್ಲಿ ಸಿಬಿಐ ಹೇಳಿದೆ.

ADVERTISEMENT

‘ಫೋಟೊ ಡಿಎನ್‌ಎ’ ಬಳಕೆ ಬಗ್ಗೆ ಯುರೋಪ್‌ ದೇಶಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳು ಈ ತಂತ್ರಜ್ಞಾನ ಬಳಸುವುದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿ ಯುರೋಪ್‌ ಒಕ್ಕೂಟದ ಖಾಸಗಿತನ ನಿಯಂತ್ರಣ ಪ್ರಾಧಿಕಾರ ಮುಂದಾಗಿದೆ. ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್, ಮೈಕ್ರೋಸಾಫ್ಟ್‌ ಕಂಪನಿಗಳು ಪ್ರಸ್ತುತ ಈ ತಂತ್ರಜ್ಞಾನ ಬಳಸುತ್ತಿಲ್ಲ ಎನ್ನಲಾಗಿದೆ. ಈ ಕಂಪನಿಗಳು ತೀವ್ರವಾದಿ ವಿಷಯ ಅಥವಾ ಭಯೋತ್ಪಾದಕರ ಸಂದೇಶಗಳನ್ನು ಬ್ಲಾಕ್‌ ಮಾಡಲೂ ಸಹ ‘ಫೋಟೊ ಡಿಎನ್‌ಎ’ ಬಳಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.