ADVERTISEMENT

ಟಿಎಂಸಿ ಸಂಸದ ಅಭಿಷೇಕ್‌ ಸಂಬಂಧಿಕರ ವಿಚಾರಣೆ

ಪಿಟಿಐ
Published 15 ಮಾರ್ಚ್ 2021, 13:25 IST
Last Updated 15 ಮಾರ್ಚ್ 2021, 13:25 IST
.
.   

ಕೋಲ್ಕತ್ತ: ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಸಂಬಂಧಿಕರನ್ನು ಸಿಬಿಐ ಸೋಮವಾರ ವಿಚಾರಣೆ ನಡೆಸಿದೆ.

ಅಭಿಷೇಕ್ ಬ್ಯಾನರ್ಜಿ ಅವರ ಅತ್ತಿಗೆ ಮೇನಕಾ ಗಂಭೀರ್‌ ಅವರ ಪತಿ ಅಂಕುಶ್‌ ಅರೋರಾ ಹಾಗೂ ಅಂಕುಶ್‌ ಅವರ ತಂದೆ ಪವನ್‌ ಅರೋರಾ ಅವರನ್ನು ವಿಚಾರಣೆ ನಡೆಸಲಾಯಿತು.

ಶುಕ್ರವಾರ ಇಬ್ಬರಿಗೂ ಈ ಬಗ್ಗೆ ನೋಟಿಸ್‌ ನೀಡಲಾಗಿತ್ತು. ಅಭಿಷೇಕ್‌ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ.

ADVERTISEMENT

ಸಿಬಿಐ ತಂಡ ಫೆಬ್ರುವರಿ 23ರಂದು ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.