ADVERTISEMENT

ಬಿಟ್‌ಕಾಯಿನ್ ಪ್ರಕರಣ: ಎಫ್‌ಬಿಐ ತಂಡ ಭಾರತಕ್ಕೆ ಬಂದಿಲ್ಲ–ಸಿಬಿಐ

ಪಿಟಿಐ
Published 10 ಏಪ್ರಿಲ್ 2022, 11:16 IST
Last Updated 10 ಏಪ್ರಿಲ್ 2022, 11:16 IST
ಬಿಟ್ ಕಾಯಿನ್
ಬಿಟ್ ಕಾಯಿನ್   

ನವದೆಹಲಿ: ‘ಕರ್ನಾಟಕದಲ್ಲಿನ ಬಿಟ್ ಕಾಯಿನ್ ಪ್ರಕರಣ ಕುರಿತು ತನಿಖೆ ನಡೆಸಲು ಅಮೆರಿಕದ ಎಫ್‌ಬಿಐ ಅಧಿಕಾರಿಗಳ ತಂಡ ಭಾರತಕ್ಕೆ ಬಂದಿಲ್ಲ’ ಎಂದು ಸಿಬಿಐ ಭಾನುವಾರ ಹೇಳಿದೆ.

‘ತನಿಖೆ ನಡೆಸಲು ಎಫ್‌ಬಿಐ ತಂಡ ಭಾರತಕ್ಕೆ ಬಂದಿದೆ ಎಂಬ ವರದಿಗಳು ನಿರಾಧಾರ. ಪ್ರಕರಣ ಕುರಿತು ತನಿಖೆ ಕೈಗೊಳ್ಳುವ ಸಂಬಂಧ ಸಿಬಿಐಗೆ ಎಫ್‌ಬಿಐ ಯಾವುದೇ ಮನವಿಯನ್ನೂ ಸಲ್ಲಿಸಿಲ್ಲ’ ಎಂದು ಸಿಬಿಐ ವಕ್ತಾರ ಆರ್‌.ಸಿ.ಜೋಶಿ ಹೇಳಿದ್ದಾರೆ.

‘ಎಫ್‌ಬಿಐ ಸೇರಿದಂತೆ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯಕ್ಕಾಗಿ ಭಾರತದಲ್ಲಿ ನ್ಯಾಷನಲ್ ಸೆಂಟ್ರಲ್ ಬ್ಯುರೊ ಫಾರ್ ಇಂಟರ್‌ಪೋಲ್‌ ಇದೆ. ಹೀಗಾಗಿ ತನಿಖೆ ನಡೆಸುವ ಸಂಬಂಧ ಎಫ್‌ಬಿಐಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.