ADVERTISEMENT

110 ಕಡೆ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 17:36 IST
Last Updated 9 ಜುಲೈ 2019, 17:36 IST

ನವದೆಹಲಿ: ಭ್ರಷ್ಟಾಚಾರ, ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ ಹಾಗೂ ಕ್ರಿಮಿನಲ್‌ ದುರ್ನಡತೆಗೆ ಸಂಬಂಧಿಸಿದಂಥ ದೂರುಗಳ ಆಧಾರದಲ್ಲಿ ಸಿಬಿಐ ಅಧಿಕಾರಿಗಳು ಕರ್ನಾಟಕವೂ ಸೇರಿದಂತೆ 19 ರಾಜ್ಯಗಳ ಒಟ್ಟು 110 ಕಡೆಗಳಲ್ಲಿ ಮಂಗಳವಾರ ಶೋಧನಡೆಸಿದ್ದಾರೆ.

ಪ್ರಕರಣಗಳಿಗೆ ಸಂಬಂಧಿಸಿದಂತೆ 30 ಹೊಸ ದೂರುಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವಾರದ ಅಂತರದಲ್ಲಿ ಸಿಬಿಐ ನಡೆಸಿದ ಎರಡನೇ ಬೃಹತ್‌ ಪ್ರಮಾಣದ ದಾಳಿ ಇದಾಗಿದೆ. ಬ್ಯಾಂಕಿಂಗ್‌ ಅಪರಾಧಕ್ಕೆ ಸಂಬಂಧಿಸಿದಂತೆ ಕಳೆದ ಮಂಗಳವಾರ ಇದೇ ರೀತಿಯ ಶೋಧವನ್ನು ಸಿಬಿಐ ಕೈಗೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.