ADVERTISEMENT

ಚಂದ್ರಯಾನ, ಸೂರ್ಯಯಾನ ಸರಿ, ಈರುಳ್ಳಿ ಸಮಸ್ಯೆಗೆ ಪರಿಹಾರ ಯಾವಾಗ: ಶಿವಸೇನೆ ಪ್ರಶ್ನೆ

ಪಿಟಿಐ
Published 25 ಆಗಸ್ಟ್ 2023, 9:19 IST
Last Updated 25 ಆಗಸ್ಟ್ 2023, 9:19 IST
ಈರುಳ್ಳಿ
ಈರುಳ್ಳಿ   

ಮುಂಬೈ: ಈರುಳ್ಳಿ ರಫ್ತಿಗೆ ಶೇ 40ರಷ್ಟು ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶಿವಸೇನಾ (ಯುಟಿಬಿ) ಟೀಕೆ ಮಾಡಿದೆ.

‘ಮೋದಿ ಸರ್ಕಾರ ಸೂರ್ಯನಿಗೂ ನೌಕೆ ಕಳುಹಿಸಬಹುದು. ಆದರೆ ಅದಕ್ಕಿಂತ ಮೊದಲು ದೇಶದ ಈರುಳ್ಳಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಯ. ಇಲ್ಲದಿದ್ದರೆ 2024ರ ಲೋಕಸಭೆ ಚುನಾವಣೆ ಗೆಲ್ಲುವ ಪ್ರಯತ್ನವು ವಿಫಲಗೊಳ್ಳುತ್ತವೆ ಎಂದು ಆಡಳಿತ ಪಕ್ಷಕ್ಕೆ ತಿಳಿದಿಲ್ಲ’ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.

‘ದೇಶದ ಜನ ಸೂರ್ಯಯಾನ, ಚಂದ್ರಯಾನ ಹಾಗೂ ಶುಕ್ರಯಾನ ಮುಂತಾದ ವಿಷಯಗಳಲ್ಲಿ ತಲ್ಲೀನರಾಗಿದ್ದಾರೆ. ಸೂರ್ಯಯಾನ ಎಲ್ಲವೂ ಸರಿ, ಆದರೆ ರಾಜ್ಯದಲ್ಲಿ ಈರುಳ್ಳಿ ಸಮಸ್ಯೆಯನ್ನು ಸ್ಥಿರಗೊಳಿಸುವುದು ಮುಖ್ಯ’ ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ADVERTISEMENT

ಮಹಾರಾಷ್ಟ್ರದ ಅಹಮದನಗರ, ನಾಸಿಕ್‌ ಹಾಗೂ ಪುಣೆ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈರುಳ್ಳಿ ರಫ್ತಿಗೆ ಶೇ 40ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಲ್ಲಿನ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.