ADVERTISEMENT

1,032 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಕ್ರಮ ಗಾಂಜಾ ಬೆಳೆ ನಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2022, 14:42 IST
Last Updated 20 ಸೆಪ್ಟೆಂಬರ್ 2022, 14:42 IST
ಗಾಂಜಾ ಬೆಳೆ
ಗಾಂಜಾ ಬೆಳೆ    

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 1,032 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಕ್ರಮ ಗಾಂಜಾವನ್ನು ಕೇಂದ್ರ ಮಾದಕ ದ್ರವ್ಯ ದಳ (ಸಿಬಿಎನ್‌)ದ ಅಧಿಕಾರಿಗಳು ಇತ್ತೀಚೆಗೆ ನಾಶಪಡಿಸಿದ್ದಾರೆ.

ನಿಖರ ಮಾಹಿತಿ ಮೇರೆಗೆ, ತಂತ್ರಗಾರಿಕೆ ರೂಪಿಸಿ, ಸಾಕಷ್ಟು ಅಧ್ಯಯನ ನಡೆಸಿ ಎರಡು ವಾರಗಳ ಕಾಲ ಈ ಕಾರ್ಯಾಚರಣೆ ನಡೆಸಲಾಗಿದೆ. ಹೀಗಾಗಿ ಇದು ಮಾದಕ ದ್ರವ್ಯದ ವಿರುದ್ಧದ ಅತಿದೊಡ್ಡ ಕಾರ್ಯಾಚರಣೆ ಎಂದು ಸ್ವತಃ ಸಿಬಿಎನ್‌ ಹೇಳಿದೆ.

ಎರಡು ವಾರಗಳ ಕಾಲ ನಡೆದ ಕಾರ್ಯಾಚರಣೆಯ ವೇಳೆ, ಅಧಿಕಾರಿಗಳು ಸಮುದ್ರ ಮಟ್ಟದಿಂದ ಮೇಲೆ 11,000 ಅಡಿಗಳವರೆಗೆ ಪ್ರತಿದಿನ ಘಟ್ಟ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಂಪ್ ಹಾಕುತ್ತಿದ್ದರು ಎಂದು ‘ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋ’ ಹೇಳಿದೆ.

ADVERTISEMENT

ಗಾಂಜಾ ಪತ್ತೆ ಮತ್ತು ಕಣ್ಗಾವಲಿಗಾಗಿ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಗಾಂಜಾ ಬೆಳೆ ನಾಶ ಮಾಡಲು ಸಿಎನ್‌ಬಿ ಮೊದಲಿಗೆ ಸ್ಥಳೀಯ ಗ್ರಾಮಗಳಲ್ಲಿ ಜಾಗೃತಿ ಕೈಗೊಂಡಿದ್ದರು. ಬೆಳೆ ನಾಶದ ವೇಳೆ ಗ್ರಾಮಸ್ಥರೂ ಅಧಿಕಾರಿಗಳೊಂದಿಗೆ ಸಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.