ಔಷಧ
ನವದೆಹಲಿ: ದೇಶದ ವಿವಿಧ ಔಷಧ ತಯಾರಿಕಾ ಕಂಪನಿಗಳು ತಯಾರಿಸಿರುವ ಔಷಧ ಮಾದರಿಗಳನ್ನು ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 52 ಮಾದರಿಗಳು ‘ಪ್ರಮಾಣಿತ ಗುಣಮಟ್ಟ ಹೊಂದಿಲ್ಲ’ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ( ಸಿಡಿಎಸ್‌ಸಿಒ) ಸೆಪ್ಟೆಂಬರ್ ತಿಂಗಳ ವರದಿ ತಿಳಿಸಿದೆ.
ಕೇಂದ್ರ ಮಾತ್ರವಲ್ಲ, ರಾಜ್ಯಮಟ್ಟದ ಪ್ರಯೋಗಾಲಯಗಳಲ್ಲೂ ವಿವಿಧ ಔಷಧಗಳ ಗುಣಮಟ್ಟ ಪರೀಕ್ಷೆ ನಡೆದಿದ್ದು, ಅದರಲ್ಲೂ 60 ಮಾದರಿಗಳು ಕಳಪೆ ಎನ್ನವುದು ತಿಳಿದುಬಂದಿದೆ ಎಂದು ಈ ವರದಿ ಉಲ್ಲೇಖಿಸಿ ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.
ಛತ್ತೀಸಗಢದ ಕಂಪನಿಯೊಂದು ಬೇರೊಂದು ಕಂಪನಿಯ ಹೆಸರು, ವಿಳಾಸ ಬಳಸಿಕೊಂಡು ನಕಲಿ ಔಷಧ ತಯಾರಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳಪೆ ಔಷಧ ತಯಾರಿಸಿದ ಕಂಪನಿ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.