ADVERTISEMENT

'ಸಮಕಾಲೀನ ಜಗತ್ತಿನಲ್ಲಿ ಗಾಂಧೀಜಿಯ ಮಹತ್ವ' ಆನ್‌ಲೈನ್ ಕೋರ್ಸ್ ಆರಂಭಿಸಿದ ಕೇಂದ್ರ

ಪಿಟಿಐ
Published 10 ಫೆಬ್ರುವರಿ 2020, 12:11 IST
Last Updated 10 ಫೆಬ್ರುವರಿ 2020, 12:11 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ನವದೆಹಲಿ: ಐಎಎಸ್, ಐಪಿಎಸ್, ಐಎಫ್‍ಒಎಸ್, ಕೇಂದ್ರ ನಾಗರಿಕ ಸೇವೆ, ಸಚಿವಾಲಯದ ಸಿಬ್ಬಂದಿ ಸೇರಿದಂತೆ ರಾಜ್ಯದ ಆಡಳಿತ ಮತ್ತು ನಾಗರಿಕ ಸೇವಾ ಸಿಬ್ಬಂದಿಗಳು ಮಹಾತ್ಮ ಗಾಂಧಿ ಬಗ್ಗೆ ತಿಳಿಯಲು ಸಹಕಾರಿಯಾಗುವಂತಆನ್‌ಲೈನ್ ಕೋರ್ಸ್‌ನ್ನುಕೇಂದ್ರ ಸರ್ಕಾರ ಆರಂಭಿಸಿದೆ.

ಸಮಕಾಲೀನ ಜಗತ್ತಿನಲ್ಲಿ ಮಹಾತ್ಮಗಾಂಧಿಯ ಮಹತ್ವ ಬಗ್ಗೆ ಇಲ್ಲಿ ಕಲಿಸಲಾಗುತ್ತದೆ.ನೀತಿ, ಶಿಷ್ಟಾಚಾರ, ಅಹಿಂಸೆ ಮತ್ತು ಶಾಂತಿಪ್ರಿಯ ಚಳವಳಿ ಮೊದಲಾದ ವಿಷಯಗಳು ಈ ಕೋರ್ಸ್‌ನಲ್ಲಿರಲಿದೆ.

ಮಹಾತ್ಮ ಗಾಂಧಿಯವರ ನೀತಿ ತತ್ವ ಮತ್ತು 21ನೇ ಶತಮಾನದ ಆಡಳಿತದಲ್ಲಿ ಅದರ ಮಹತ್ವ ಏನು ಎಂಬುದನ್ನು ಈ ಕೋರ್ಸ್‌ನಲ್ಲಿ ತಿಳಿಸಲಾಗುವುದು. ಅಧಿಕಾರಿಗಳ ತರಬೇತಿ ಕಾರ್ಯಕ್ರಮದ ಭಾಗವಾಗಿರುವ ಈ ಕೋರ್ಸ್ ಏಕೀಕೃತ ಸರ್ಕಾರ ಆನ್‌ಲೈನ್ತರಬೇತಿ (ಐಜಿಒಟಿ) ಸಹಯೋಗದಿಂದ ನಡೆಯಲಿದೆ.

ADVERTISEMENT

ಸೆಂಟರ್ ಫಾರ್ ಗಾಂಧಿ ಆ್ಯಂಡ್ ಪೀಸ್ ಸ್ಟಡೀಸ್, ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಿ ನವದೆಹಲಿ ಮತ್ತು ಗಾಂಧಿ ಸ್ಮೃತಿ ಆ್ಯಂಡ್ ದರ್ಶನ್ ಸಮಿತಿ ರಾಜ್‌ಘಾಟ್ - ಇದರ ಸಹಕಾರದಿಂದ ಸಮಕಾಲೀನ ಜಗತ್ತಿನಲ್ಲಿ ಗಾಂಧೀಜಿಯಮಹತ್ವ ಎಂಬ ಆನ್‌ಲೈನ್ ಕೋರ್ಸ್‌ನ್ನುಸಿದ್ಧಪಡಿಸಿದೆ.

ಅಹಿಂಸಾ ಚಳವಳಿ, ಶಾಂತಿಚಳವಳಿ,ಮಹಿಳೆಯರ ಚಳವಳಿ, ಸ್ವರಾಜ್, ಸ್ವದೇಶಿ, ಸತ್ಯಾಗ್ರಹ, ವಿಶ್ವಾಸ , ನೀತಿ, ನೈತಿಕತೆ ಮೊದಲಾದ ವಿಷಯಗಳನ್ನೊಳಗೊಂಡ ಪಾಠ ಈ ಕೋರ್ಸ್‌ನಲ್ಲಿರಲಿದೆ.

ರಾಜ್ಯ ನಾಗರಿಕಸೇವೆಯಲ್ಲಿರುವ ಗ್ರೂಪ್ 'ಬಿ' ಮತ್ತು 'ಸಿ' ವಿಭಾಗದ ಅಧಿಕಾರಿಗಳು ಕೂಡಾ ಈ ಕೋರ್ಸ್‌ಗೆ ಸೇರಲು ಅರ್ಜಿ ಸಲ್ಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.