ADVERTISEMENT

ಅಶ್ಲೀಲ, ಕಾನೂನು ಬಾಹಿರ ಅಂಶ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಎಚ್ಚರಿಕೆ

ಪಿಟಿಐ
Published 30 ಡಿಸೆಂಬರ್ 2025, 16:07 IST
Last Updated 30 ಡಿಸೆಂಬರ್ 2025, 16:07 IST
<div class="paragraphs"><p>ಸಾಮಾಜಿಕ ಮಾಧ್ಯಮ</p></div>

ಸಾಮಾಜಿಕ ಮಾಧ್ಯಮ

   

ನವದೆಹಲಿ: ಅಶ್ಲೀಲ ಮತ್ತು ಕಾನೂನು ಬಾಹಿರ ಅಂಶಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನಿರ್ದೇಶನದ ಪಾಲನೆಯಲ್ಲಿ ವಿಫಲವಾದಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

‘ಕಾನೂನುಬಾಹಿರ ವಿಷಯವನ್ನು ಗುರುತಿಸುವಲ್ಲಿ ಮತ್ತು ಅದನ್ನು ತೆಗೆದು ಹಾಕುವಲ್ಲಿ ಹೆಚ್ಚಿನ ಸ್ಥಿರತೆಯ ಅಗತ್ಯವಿದೆ’ ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ವಿದ್ಯುನ್ಮಾನ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸುತ್ತೋಲೆ ಮೂಲಕ ಹೇಳಿದೆ.

ADVERTISEMENT

‘ಕೆಲವು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಅಶ್ಲೀಲ, ಕಾನೂನುಬಾಹಿರ, ಅಸಮಂಜಸ ಅಂಶಗಳ ವಿರುದ್ಧ ಕಠಿಣ ಕ್ರಮ ಜರುಗಿಸದಿರುವುದನ್ನು ಸಚಿವಾಲಯವು ಗಮನಿಸಿದೆ. ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಐಟಿ ಕಾಯ್ದೆ  ಅಥವಾ ನಿಯಮಗಳು–2021ರ ನಿಬಂಧನೆಗೆ ಒಳಪಟ್ಟಿದ್ದು, ನಿಯಮಗಳ ಪಾಲನೆ ಕಡ್ಡಾಯ’ ಎಂದು ಅದು ಹೇಳಿದೆ.

ದೊಡ್ಡ ದೊಡ್ಡ ಸಂಸ್ಥೆಗಳು ಬಳಕೆದಾರರ ದೂರುಗಳ ಮೇಲೆ ಅವಲಂಬನೆಯಾಗುವ ಬದಲಾಗಿ, ಕಾನೂನುಬಾಹಿರ ಅಂಶಗಳ ತಡೆಗಾಗಿ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.