ADVERTISEMENT

'ನೋ ಕೊರೊನಾ ನೋ': ರೂಪಾಂತರಿ ಕೊರೊನಾ ವೈರಸ್‌ಗೆ ಕೇಂದ್ರ ಸಚಿವರ ಹೊಸ ಘೋಷಣೆ

ಏಜೆನ್ಸೀಸ್
Published 28 ಡಿಸೆಂಬರ್ 2020, 4:41 IST
Last Updated 28 ಡಿಸೆಂಬರ್ 2020, 4:41 IST
ಕೇಂದ್ರ ಸಚಿವ ರಾಮದಾಸ್‌ ಅಠವಳೆ
ಕೇಂದ್ರ ಸಚಿವ ರಾಮದಾಸ್‌ ಅಠವಳೆ    

ಮುಂಬೈ: ಕೇಂದ್ರ ಸಚಿವ ರಾಮದಾಸ್‌ ಅಠವಳೆ ಅವರ 'ಗೋ ಕೊರೊನಾ ಗೋ' ಎಂಬ ಘೋಷಣೆಯು ಈ ಹಿಂದೆ ಭಾರತದಾದ್ಯಂತ ಮನೆಮಾತಾಗಿತ್ತು. ಈಗ ಹೊಸ ರೂಪ ಪಡೆದುಕೊಂಡಿರುವ ಕೊರೊನಾ ವೈರಸ್‌ಗೆ 'ನೋ ಕೊರೊನಾ ನೋ' ಎಂದು ಹೇಳುವ ಮೂಲಕ ಅಠವಳೆ ಅವರು ಮತ್ತೊಂದು ಘೋಷಣೆಯನ್ನು ಹೊರಡಿಸಿದ್ದಾರೆ.

ರಾಮದಾಸ್‌ ಅಠವಳೆ ಅವರು 'ಗೋ ಕೊರೊನಾ ಗೋ' ಎಂದು ಈ ಹಿಂದೆ ಹೇಳಿದ್ದರು. ಅದಕ್ಕೆ ಸಂಬಂಧಪಟ್ಟ ವಿಡಿಯೊವೊಂದು ವೈರಲ್‌ ಆಗಿತ್ತು. ಆ ನಂತರ 'ಗೋ ಕೊರೊನಾ ಗೋ' ಎಂಬ ಘೋಷಣೆಯನ್ನು ರೀಮಿಕ್ಸ್‌ ಮಾಡಿ, ಪಾಶ್ಚಾತ್ಯ ಸಂಗಿತದ ಸ್ಪರ್ಶ ನೀಡಲಾಗಿತ್ತು.

ಈಗ ಹೊಸ ರೂಪ ಪಡೆದುಕೊಂಡಿರುವ ಕೊರೊನಾ ವೈರಸ್‌ಗೆ 'ನೋ' ಎಂದು ಅಠವಳೆ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ಈ ಹಿಂದೆ ನಾನು 'ಗೋ ಕೊರೊನಾ ಗೋ' ಎಂದು ಹೇಳಿದ್ದೆ. ಆದರೆ, ಅದು ನನ್ನ ಬಳಿಯೂ ಬಂದಿತ್ತು. ಅಂದರೆ, ನನಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ನನ್ನ ಘೋಷಣೆಯಂತೆ ಈಗ ಹಳೆಯ ಕೊರೊನಾ ತೊಲಗುತ್ತಿದೆ. ಹೊಸ ರೂಪ ಪಡೆದುಕೊಂಡು ಬರುತ್ತಿರುವ ಕೊರೊನಾ ವೈರಸ್‌ಗೆ ನಾನು 'ನೋ ಕೊರೊನಾ ನೋ' ಎನ್ನುತ್ತೇನೆ' ಎಂದು ತಿಳಿಸಿದ್ದಾರೆ.

ADVERTISEMENT

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್‌ ಪತ್ತೆಯಾಗಿದೆ. ಅದು ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

ಹೊಸ ಸ್ವರೂಪದ ವೈರಸ್‌ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.