ADVERTISEMENT

ಇದೇ 8ರಿಂದ ಕೇಂದ್ರ ಸಿಬ್ಬಂದಿಗೆ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಮರು ಜಾರಿ

ಪಿಟಿಐ
Published 1 ನವೆಂಬರ್ 2021, 11:45 IST
Last Updated 1 ನವೆಂಬರ್ 2021, 11:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೇಂದ್ರ ಸರ್ಕಾರವು ನವೆಂಬರ್ 8ರಿಂದ ಅನ್ವಯವಾಗುವಂತೆ ತನ್ನ ಎಲ್ಲ ಹಂತದ ಸಿಬ್ಬಂದಿಗೆ ಬಯೊಮೆಟ್ರಿಕ್‌ ಕ್ರಮದಲ್ಲಿ ಹಾಜರಾತಿ ಪಡೆಯುವ ವ್ಯವಸ್ಥೆಯನ್ನು ಮರುಜಾರಿಗೊಳಿಸಲು ತೀರ್ಮಾನಿಸಿದೆ.

ಬಯೊಮೆಟ್ರಿಕ್ ಮಷೀನ್‌ ಬಳಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡುವುದು ಆಯಾ ಇಲಾಖೆಗಳ ಮುಖ್ಯಸ್ಥರ ಹೊಣೆಗಾರಿಕೆ. ಸಿಬ್ಬಂದಿ ಹಾಜರಾತಿ ನೀಡುವ ಮೊದಲು ಕೈಗಳನ್ನು ಸ್ವಚ್ಛಪಡಿಸಿಕೊಳ್ಳಬೇಕು ಎಂದೂ ಕೇಂದ್ರ ಸಿಬ್ಬಂದಿ ಸಚಿವಾಲಯವು ತಿಳಿಸಿದೆ.

ಕೋವಿಡ್ ಕಾರಣದಿಂದಾಗಿ ಸಿಬ್ಬಂದಿಗೆ ಇದುವರೆಗೂ ಬಯೊಮೆಟ್ರಿಕ್ ಕ್ರಮದಲ್ಲಿ ಹಾಜರಾತಿ ನೀಡುವುದರಿಂದ ವಿನಾಯಿತಿ ನೀಡಲಾಗಿತ್ತು. ಸಿಬ್ಬಂದಿಯು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವುದು ಅಗತ್ಯ. ದಟ್ಟಣೆಯನ್ನು ತಪ್ಪಿಸಲು ಅಗತ್ಯವಿದ್ದರೆ ಹೆಚ್ಚುವರಿ ಮಷೀನ್ ಅನ್ನು ಅಳವಡಿಸಬೇಕು ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ADVERTISEMENT

ಕೆಲಸದ ವೇಳೆ ಮಾಸ್ಕ್‌ ಧರಿಸುವುದು ಕಡ್ಡಾಯ. ಕಚೇರಿ ಸಭೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂದುವರಿಸಬಹುದು. ಅನಗತ್ಯ ಎಂದಾದಲ್ಲಿ ವ್ಯಕ್ತಿಗತ ಭೇಟಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಕೈಬಿಡಬೇಕು. ಎಲ್ಲ ಸಿಬ್ಬಂದಿಯು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.