ADVERTISEMENT

ಜಮ್ಮು ಮತ್ತು ಕಾಶ್ಮೀರಕ್ಕೆ 371ನೇ ವಿಧಿ ಸೌಲಭ್ಯ?

ಕೇಂದ್ರ ಗೃಹಸಚಿವಾಲಯದ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 20:00 IST
Last Updated 12 ಡಿಸೆಂಬರ್ 2019, 20:00 IST
ಶ್ರೀನಗರ
ಶ್ರೀನಗರ   

ಶ್ರೀನಗರ: ಹೊಸದಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆಯಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 371ನೇ ವಿಧಿ ಅಡಿ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

‘ಈ ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಪಡಿಸಿದ್ದಕ್ಕೆ ಪರಿಹಾರವಾಗಿ, ಜಮ್ಮು ಮತ್ತು ಕಾಶ್ಮೀರದ ಕಾನೂನು ಇಲಾಖೆಗೆ ಕೇಂದ್ರ ಗೃಹಸಚಿವಾಲಯ ಈ ಪ್ರಸ್ತಾವನೆ ಕಳುಹಿಸಿದೆ’ ಎಂದು ಮೂಲಗಳು ತಿಳಿಸಿವೆ.

‘ಹೊಸ ವ್ಯವಸ್ಥೆಯ ರೂಪರೇಷೆಗಳನ್ನು ಸಿದ್ಧಪಡಿಸಲು ಚರ್ಚೆ ನಡೆಸಲಾಗುತ್ತಿದೆ. ಸ್ಥಳೀಯರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ, ನೆರೆಯ ಹಿಮಾಚಲ ಪ್ರದೇಶದಲ್ಲಿ ಇರುವ ವ್ಯವಸ್ಥೆಯ ಆಧಾರದ ಮೇಲೆ ಈ ಸೌಲಭ್ಯಗಳನ್ನು ರೂಪುಗೊಳಿಸಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಜಮ್ಮುವಿನಲ್ಲೂ ಕಳೆದ ಕೆಲವು ಸಮಯದಿಂದ 371ನೇ ವಿಧಿ ಕುರಿತು ಆಗ್ರಹ ಕೇಳಿಬರುತ್ತಿದೆ.

‘ಸಂವಿಧಾನದ 371ನೇ ವಿಧಿ ಅಡಿಯಲ್ಲಿ ಎಲ್ಲಾ ಗುಡ್ಡಗಾಡು ರಾಜ್ಯಗಳಿಗೂ ವಿಶೇಷ ಸೌಲಭ್ಯಗಳು ಇವೆ’ ಎಂದು ಪಿಡಿಪಿ ನಾಯಕ ಮುಜಫ್ಫರ್ ಹುಸೇನ್ ಬೇಗ್ ಕಳೆದ ತಿಂಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.