ಭಾರೀ ಮಳೆಗೆ ಮುಳುಗಿದ ಕಾರುಗಳು
ಚಿತ್ರ ಕೃಪೆ: @iNikhilsaini
ಚಂಡೀಗಢ: ಪಂಜಾಬ್ ಹಾಗೂ ಹರಿಯಾಣದಲ್ಲಿ ಭಾರೀ ಮಳೆಯಾಗಿದ್ದು ಅಲ್ಲಿನ ಜನರ ಜೀವನ ಅಸ್ತವ್ಯಸ್ತ ಆಗಿದೆ. ನಗರ ಪ್ರದೇಶಗಳು ಪ್ರವಾಹದಲ್ಲಿ ಮುಳುಗಿ ಹೋಗಿದೆ.
ನಿಲ್ಲಿಸಿದ ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಚಂಡೀಗಢದ ಕೆಲವು ನಗರಗಳು ಪ್ರವಾಹದ ಅಬ್ಬರಕ್ಕೆ ಸಂಪೂರ್ಣ ಜಲಾವೃತ ಆಗಿದೆ. ಪಂಚಕುಲ ಕಡೆಗೆ ಹೋಗುವ ರಸ್ತೆಗಳು ಸೇರಿದಂತೆ ಹಲವಾರು ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನಗಳು ಸಿಲುಕಿಕೊಂಡವು.
ಪಂಜಾಬ್ ಮತ್ತು ಹರಿಯಾಣ ನಾಗರಿಕ ಸಚಿವಾಲಯಗಳ ಪಾರ್ಕಿಂಗ್ ಸ್ಥಳವೂ ಜಲಾವೃತವಾಗಿತ್ತು. ಮುಖ್ಯ ರಸ್ತೆಗಳಲ್ಲಿ ವಾಹನಸಂಚಾರ ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.