ADVERTISEMENT

ನ್ಯಾಯಾಲಯಕ್ಕೆ ಶರಣಾದ ಪಶ್ಚಿಮ ಬಂಗಾಳದ ಸಚಿವ ಚಂದ್ರನಾಥ ಸಿನ್ಹಾ: ಜಾಮೀನು

ಪಶ್ಚಿಮ ಬಂಗಾಳ: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 13:40 IST
Last Updated 6 ಸೆಪ್ಟೆಂಬರ್ 2025, 13:40 IST
ಚಂದ್ರನಾಥ ಸಿನ್ಹಾ
ಚಂದ್ರನಾಥ ಸಿನ್ಹಾ   

ಕೋಲ್ಕತ್ತ (ಪಿಟಿಐ): ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಚಂದ್ರನಾಥ ಸಿನ್ಹಾ ಅವರು ಇಲ್ಲಿನ ಜಾರಿ ನಿರ್ದೇಶನಾಲಯದ (ಇ.ಡಿ ) ಪ್ರಕರಣಗಳ ನ್ಯಾಯಾಲಯಕ್ಕೆ ಶನಿವಾರ ಶರಣಾದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಜವಳಿ ಖಾತೆಯ ಸಚಿವರಾಗಿರುವ ಸಿನ್ಹಾ ಅವರು ನ್ಯಾಯಾಲಯದ ಆದೇಶದಂತೆ ಶರಣಾದರು. ಇ.ಡಿ ಕಸ್ಟಡಿಗೆ ಕೋರಿತು. ಆದರೆ ನ್ಯಾಯಾಲಯವು ಷರತ್ತು ವಿಧಿಸಿ, ₹ 10 ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌ ಮೇಲೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಮೀನು ಮಂಜೂರಾಗಿದ್ದರೂ ಸಿನ್ಹಾ ಅವರು ತಮ್ಮ ವಿಧಾನಸಭಾ ಕ್ಷೇತ್ರ ಹಾಗೂ ಕೋಲ್ಕತ್ತದ ಹೊರ ಹೋಗುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ.

ADVERTISEMENT

‘ತನಿಖೆಗೆ ಸಹಕಾರ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಮುಗಿಯುವ ತನಕವೂ ಷರತ್ತುಗಳನ್ನು ಪಾಲಿಸಬೇಕು’ ಎಂದು ಆದೇಶಿಸಿದೆ.

ಹಣ ದುರುಪಯೋಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನ್ಹಾ ಕೆಲವು ಸಮಯದಿಂದ ಇ.ಡಿ.ಯ ಕಣ್ಗಾವಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.