ADVERTISEMENT

ಚಂದ್ರಯಾನ 2: ವಿಕ್ರಮ್‌ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣಗಳ ಮಾಹಿತಿ

ಚಂದ್ರಯಾನ 2

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 21:46 IST
Last Updated 6 ಸೆಪ್ಟೆಂಬರ್ 2019, 21:46 IST
   

02: 46–ವಿಕ್ರಮ್ ಲ್ಯಾಂಡರ್‌ಗೆ ಏನಾಯಿತು ಎಂಬ ಮಾಹಿತಿ ತಕ್ಷಣ ಲಭ್ಯವಿಲ್ಲದ ಕಾರಣ ಅದರ ಕಥೆ ಏನು ಎಂಬುದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಅದು ಎಲ್ಲಿ ಲ್ಯಾಂಡ್ ಆಗಬೇಕು ಎಂಬ ಗುರಿ ಇತ್ತೋ ಅಲ್ಲಿ ಇಳಿಯಲಿಲ್ಲ. ಆದರೆ ಆರ್ಬಿಟರ್ ಉತ್ತಮವಾಗಿ ಪರಿಭ್ರಮಣ ನಡೆಸುತ್ತಿದೆ ಎಂದು ಇಸ್ರೋ ಹೇಳಿದೆ.

ಧೈರ್ಯ ಕಳೆದುಕೊಳ್ಳಬೇಡಿ: ಪ್ರಧಾನಿ

02: 31–ವಿಜ್ಞಾನಿಗಳು ಧೈರ್ಯ ಕಳೆದುಕೊಳ್ಳಬಾರದು, ಹೀಗೆಲ್ಲ ಆಗುವುದು ಸಹಜ. ಮುಂದೆ ನಾವು ಯಶಸ್ಸು ಗಳಿಸುವುದು ನಿಶ್ಚಿತ ಎಂದು ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಲ್ಲಿ ಧೈರ್ಯ ತುಂಬಿದರು.

ADVERTISEMENT

ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ ನಸುಕಿನಲ್ಲಿ ಚಂದ್ರಯಾನ-2 ವ್ಯೋಮ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಅದರಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಸಾಂತ್ವನದ ಮಾತುಗಳನ್ನು ಹೇಳಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಅವರು ಒಂದಿಷ್ಟು ಮಾತನಾಡಿ ನಿರ್ಗಮಿಸಿದರು.

02: 25–ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಲ್ಯಾಂಡರ್ 'ವಿಕ್ರಮ್' ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು.ಇದರಿಂದ ಈ ಯೋಜನೆ ಯಶಸ್ವಿ ಆಯಿತೇ ಇಲ್ಲವೇ ಎಂಬ ಬಗ್ಗೆ ವಿಕ್ರಮ್ ಲ್ಯಾಂಡರ್ ನಿಂದ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಕೊನೆ ಹಂತದಲ್ಲಿ ಲ್ಯಾಂಡರ್ ಪಥ ಬಿಟ್ಟು ಇಳಿಯಲಾರಂಭಿಸಿತು. ಬಳಿಕ ಏನಾಯಿತು ಎಂಬುದು ಮಿಷನ್ ಕಂಟ್ರೋಲ್‌ಗೆ ಮಾಹಿತಿ ಸಿಗಲಿಲ್ಲ. ಇದರಿಂದ ಇಸ್ರೊ ವಿಜ್ಞಾನಿಗಳು ಆತಂಕಕ್ಕೆ ಒಳಗಾದರು.

ವಿಕ್ರಮ್ ನಿಂದ ಮಾಹಿತಿಗಾಗಿ ಬಹಳ ಹೊತ್ತು ಕಾಯಲಾಯಿತು. ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಬಂದು ಮಾಹಿತಿ ನೀಡಿದ ಬಳಿಕ ಅಲ್ಲಿಂದ ತೆರಳಿದರು.

ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷ ಕಳೆದಿಕೊಂಡಿತು. ಸುಮಾರು 2.1ಕಿ.ಮೀ ಇರುವಾಗ ಸಂಪರ್ಕ ಕಳೆದುಕೊಂಡಿತು. ಆಗ 2.12ನಿಮಿಷ ಆಗಿತ್ತು. ಆಗ ಸಿಗ್ನಲ್ ಕಡಿತವಾಯಿತು. ಟ್ರಾಜೆಕ್ಟರಿಯ ತನ್ನ ರೇಖೆ ಬಿಟ್ಟು ಹೊರ ಹೋದ ತಕ್ಷಣ ವಿಜ್ಞಾನಿಗಳ ಆತಂಕಕ್ಕೆ ಒಳಗಾದರು. ಅಲ್ಲಿವರೆಗೆ ಪ್ರತಿ ಹಂತದ ಯಶಸ್ಸನ್ನು ಅವರು ಸಂಭ್ರಮಿಸಿದರು.

02: 10–ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿದೆ ಎಂಬಸಂದೇಶ ಬಂದಿದ್ದು, ಇಸ್ರೊ ಕೇಂದ್ರದಲ್ಲಿ ಇನ್ನೂ ಸಂಭ್ರಮ ಕಾಣಿಸಿಲ್ಲ.

02: 06–ವಿಕ್ರಂ ಲ್ಯಾಂಡರ್‌ನಿಂದ ಸಿಗ್ನಲ್‌ ಕಡಿತ, ಸಿಗ್ನಲ್‌ಗಾಗಿ ಕಾಯುತ್ತಿರುವ ಇಸ್ರೋ ವಿಜ್ಞಾನಿಗಳು

02: 00–ಎಲ್ಲರ ಮುಖದಲ್ಲೂ ಆತಂಕದ ಛಾಯೆ ಇದೆ,ಇಸ್ರೊ ಆಧ್ಯಕ್ಷರಿಂದ ಪ್ರಧಾನಿಗೆ ಮಾಹಿತಿ. ಆದರೆ ಮುಖದಲ್ಲಿ ಉತ್ಸಾಹ ಇಲ್ಲ

01: 58–ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿರುವ ಬಗ್ಗೆ ಅಂತಿಮ ಪ್ರಕಟಣೆಗೆ ಕಾಯುತ್ತಿರುವ ಇಸ್ರೊ ಕೇಂದ್ರ

01: 55–13 ನಿಮಿಷದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇನ್ನು 2 ನಿಮುಷದಲ್ಲಿ ನೆಲ ಮುಟ್ಟುವ ನಿರೀಕ್ಷೆ ಇದೆ. ಈಗ 200 ಮೀಟರ್ ಎತ್ತರದಲ್ಲಿ ಲ್ಯಾಂಡರ್ ಇದು ಸಿಗ್ನಲ್‌ ದೊರೆಕಿಲ್ಲ. ಕೆಲ ಕ್ಷಣ ಆತಂಕ

01: 48–ಚಂದ್ರನ ಅಂಗಳದಲ್ಲಿ ವಿಕ್ರಮ್‌ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಆರಂಭ

01: 37–ಇನ್ನು 7 ನಿಮಿಷದಲ್ಲಿ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳುಸುವ ಪ್ರಕ್ರಿಯೆ ಆರಂಭ ಇಸ್ರೊ ಕೇಂದ್ರದಲ್ಲಿ ಉಸಿರು ಬಿಗಿ ಹಿಡಿದಂತಹ ವಾತಾವರಣ

01: 26–ಬೆಂಗಳೂರಿನ ಪೀಣ್ಯದಲ್ಲಿ (ಜಾಲಹಳ್ಳಿ ಕ್ರಾ ಸ್ ಸಮೀಪ)ರುವ ಇಸ್ರೊದ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್ ವರ್ಕ್ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು.

01: 17–ಇಸ್ರೊ ಕೇಂದ್ರದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ರಾಧಾಕೃಷ್ಣನ್ ಸಹಿತ ಹಲವಾರು ಹಿರಿಯ ವಿಜ್ಞಾನಿಗಳು ಸೇರಿದ್ದಾರೆ.
ಇನ್ನು 22 ನಿಮಿಷದಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲಾಗುವುದು ಎಂದು ಇಸ್ರೊ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟನೆ ಮಾಡಲಿದೆ.

01: 12–ಚಂದ್ರಯಾನ–2:ಚಂದ್ರನ ಅಂಗಳದಲ್ಲಿ ವಿಕ್ರಮ್‌ ಹೆಜ್ಜೆ ಇರಿಸಲು ಕ್ಷಣಗಣನೆ ಆರಂಭವಾಗಿದೆ. ಈ ಕೌತುಕವನ್ನು ನೋಡಲು ಜಗತ್ತು ಕಾಯುತ್ತಿದ್ದು 1.50ರ ಸುಮಾರಿಗೆ‘ವಿಕ್ರಂ’ ಲ್ಯಾಂಡರ್‌ ಚಂದ್ರನ ಅಂಗಳದ ಮೇಲೆ ಇಳಿಯಲಿದೆ.

12: 36– ಬೆಂಗಳೂರು ಪೀಣ್ಯದಲ್ಲಿ (ಜಾಲಹಳ್ಳಿ ಕ್ರಾ ಸ್ ಸಮೀಪ) ಇಸ್ರೊದ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್ ವರ್ಕ್ ಕೇಂದ್ರ ಇದೆ. ಬ್ಯಾಲಾಳುವಿನಲ್ಲಿರುವ ಬೃಹತ್ ಆಂಟೆನಾ ಮೂಲಕ ಚಂದ್ರಯಾನ ವ್ಯೋಮ ನೌಕೆಯನ್ನು ನಿಯಂತ್ರಿಸಲಾಗುತ್ತಿದ್ದು, ಪೀಣ್ಯದಲ್ಲಿ ಇದೆಲ್ಲದರ ಕಮಾಂಡ್ ನಡೆಯುತ್ತದೆ. ಹೀಗಾಗಿ ಇದೀಗ ಜಗತ್ತಿನ ಗಮನ ಪೀಣ್ಯದತ್ತ ನೆಟ್ಟಿದೆ.

11: 47– ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಕ್ಷಣಗಣನೆ ಆರಂಭವಾಗಿದ್ದು ಬೆಂಗಳೂರಿನ ಪೀಣ್ಯದಲ್ಲಿರುವ ಐಎಸ್ಟಿಆರ್ಎಸಿ ಐಎಸ್‌ಟಿಆರ್‌ಸಿ ಕೇಂದ್ರದಲ್ಲಿ ದೇಶದ ಎಲ್ಲೆಡೆಯಿಂದ ಬಂದಿರುವ ಮಾಧ್ಯಮ ಪ್ರತಿನಿಧಿಗಳು. ಮಾಧ್ಯಮಗಳ ವರದಿಗೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

10: 23– ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್‌ ಮತ್ತು ರೋವರ್‌ ಶನಿವಾರ ಬೆಳಗಿನ ಜಾವಚಂದ್ರನ ನೆಲದ ಮೇಲೆ ಇಳಿಯಲಿವೆ. ಆ ದೃಶ್ಯದ ನೇರ ಪ್ರಸಾರಕ್ಕೆ ಇಸ್ರೊ ವ್ಯವಸ್ಥೆ ಮಾಡಿದ್ದು ಇದನ್ನು ವೀಕ್ಷಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದಾರೆ. ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ಇಸ್ರೋ ವಿಜ್ಞಾನಿಗಳ ಜತೆ ವೀಕ್ಷಣೆ ಮಾಡಲಿದ್ದಾರೆ.

8:10– ವಿಕ್ರಂ ಲ್ಯಾಂಡರ್‌ ಕುರಿತ ಮಾಹಿತಿ:

8:05–ಚಂದ್ರಯಾನ 2 ಯೋಜನೆಯ ಪೂರ್ಣ ವಿವರ ಇಲ್ಲಿದೆ...

8:00-ಚಂದ್ರಯಾನ–2 ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್‌ ಮತ್ತು ರೋವರ್‌ ಶನಿವಾರ ಬೆಳಗಿನ ಜಾವಚಂದ್ರನ ನೆಲದ ಮೇಲೆ ಇಳಿಯಲಿವೆ. ಆ ದೃಶ್ಯದ ನೇರ ಪ್ರಸಾರಕ್ಕೆ ಇಸ್ರೊ ವ್ಯವಸ್ಥೆ ಮಾಡಿದೆ. ನ್ಯಾಷನಲ್‌ ಜಿಯಾಗ್ರಫಿಕ್‌ ಚಾನೆಲ್‌ ನೇರ ಪ್ರಸಾರ ಮಾಡಲಿದೆ. ಇಸ್ರೊ ಯುಟ್ಯೂಬ್‌ ಚಾನೆಲ್‌ನಲ್ಲಿರಾತ್ರಿ 1:10ರಿಂದ ನೇರಪ್ರಸಾರ ವೀಕ್ಷಿಸಬಹುದು

* ಕೋಟ್ಯಂತರ ವರ್ಷಗಳಿಂದ ಈ ಭಾಗದ ಕುಳಿಗಳ ಮೇಲೆ ಸೂರ್ಯನ ಬೆಳಕಿನ ಸ್ಪರ್ಶವಾಗಿಲ್ಲ. ಇದರಿಂದಾಗಿ ಸೌರವ್ಯೂಹ ಸೃಷ್ಟಿ ರಹಸ್ಯದ ದಾಖಲೆಗಳನ್ನು ಈ ಪ್ರದೇಶ ಕಾಪಿಟ್ಟುಕೊಂಡಿರುವ ಸಾಧ್ಯತೆ ಹೇರಳವಾಗಿದೆ ಎಂಬುದು ವಿಜ್ಞಾನಿಗಳ ನಂಬಿಕೆ.

* ಇಲ್ಲಿ ಸದಾ ನೆರಳು ಆವರಿಸಿಕೊಂಡಿರುವುದರಿಂದ ನೆಲದ ಕುಳಿಗಳಲ್ಲಿ 1000 ಲಕ್ಷ ಟನ್‌ ನೀರಿನ ಸಂಗ್ರಹ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

* ನೆಲದ ಪದರದಲ್ಲಿ ಹೈಡ್ರೋಜನ್‌, ಅಮೋನಿಯಾ, ಮಿಥೇನ್, ಸೋಡಿಯಂ, ಪಾದರಸ ಹಾಗೂ ಬೆಳ್ಳಿ ಅಂಶಗಳನ್ನು ಒಳಗೊಂಡ ನೈಸರ್ಗಿಕ ಸಂಪನ್ಮೂಲಗಳಿರುವ ಸಾಧ್ಯತೆ.

* ಮುಂದಿನ ಬಾಹ್ಯಾಕಾಶ ಶೋಧಗಳಿಗೆ ಚಂದ್ರನ ಮೇಲಿನ ಈ ಭಾಗವು ಇಳಿದು ಹೊರಡುವ ನಿಲ್ದಾಣವಾಗಿ ಬಳಕೆಯಾಗಬಹುದು.

7:45- ವಿಕ್ರಂ ಲ್ಯಾಂಡರ್‌ ಚಂದ್ರನ ಅಂಗಳ ಮುಟ್ಟಿದ ನಂತರ ಲ್ಯಾಂಡರ್‌ನಿಂದ ಹೊರ ಬರಲಿರುವ ಪ್ರಜ್ಞಾನ್‌ ರೋವರ್‌ ಕಾರ್ಯಾಚರಣೆ ಕುರಿತು ಇಸ್ರೊ ರೂಪಿಸಿರುವ ವಿಡಿಯೊ ಇಲ್ಲಿದೆ–

7:38– ‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಭೂತಾನ್‌ನ ಕೆಲವು ವಿದ್ಯಾರ್ಥಿಗಳು, ವಿಜ್ಞಾನಿಗಳೊಂದಿಗೆಬೆಂಗಳೂರಿನ ಇಸ್ರೊ ಕೇಂದ್ರದಿಂದ ಚಂದ್ರಯಾನದ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ’–ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್‌.ಸಂತೋಷ್

7:31– ಚಂದ್ರಯಾನ–2ರ ವಿಶೇಷ ಕ್ಷಣಗಳನ್ನು ಕಣ್ತುಂಬಿಕೊಳ್ಳಿ, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಹಂಚಿಕೊಳ್ಳಿ...– ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌

7:30– ಚಂದ್ರನ ದಕ್ಷಿಣ ಧ್ರುವದತ್ತ ಚಲಿಸಿರುವಚಂದ್ರಯಾನ–2ಬಾಹ್ಯಾಕಾಶ ನೌಕೆಯಿಂದ‘ವಿಕ್ರಂ’ ಲ್ಯಾಂಡರ್‌ಇಳಿಸುವ ಪ್ರಕ್ರಿಯೆಗೆ ಕ್ಷಣಗಣನೆ

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.