ADVERTISEMENT

’ಚೇಸ್‌ ದ ವೈರಸ್‘ ಅಭಿಯಾನ ಮಹಾರಾಷ್ಟ್ರದ್ಯಂತ ವಿಸ್ತರಣೆ

ಪಿಟಿಐ
Published 28 ಜೂನ್ 2020, 11:22 IST
Last Updated 28 ಜೂನ್ 2020, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊರೊನಾ ಸೋಂಕು ತಡೆಯಲು ಮುಂಬೈನಲ್ಲಿ ಆರಂಭಿಸಿರುವ ‘ಚೇಸ್‌ ದ ವೈರಸ್’ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದನ್ನು ರಾಜ್ಯದ ಇತರೆ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭಾನುವಾರ ಹೇಳಿದರು.

ಈ ಅಭಿಯಾನದ ಭಾಗವಾಗಿ ಸೋಂಕಿತರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದ 15 ಮಂದಿಯನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಸಾಂಸ್ಥಿಕ ಕ್ವಾರಂಟೈನ್‌ನ ನಿಬಂಧನೆಗಳು, ಸೌಲಭ್ಯಗಳನ್ನು ಕುರಿತು ಸಮುದಾಯದ ಮುಖಂಡರು ವಿವರಿಸಲಿದ್ದಾರೆ.

‘ಮೇ 27ರಂದು ಅಭಿಯಾನ ಆರಂಭವಾಗಿತ್ತು. ಉತ್ತಮ ಸ್ಪಂದನೆ ಹಿನ್ನೆಲೆಯಲ್ಲಿ ರಾಜ್ಯದ ಇತರೆ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ಅಲ್ಲದೆ, ಬಡವರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ಪೂರೈಸಲು ಆಗುವಂತೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅಭಿಯಾನವನ್ನು ವಿಸ್ತರಿಸಬೇಕು ಎಂದು ಕೋರಿ ಪ್ರಧಾನಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.