ADVERTISEMENT

ಕುನೊ ರಾಷ್ಟ್ರೀಯ ಉದ್ಯಾನ: 5 ಮರಿಗಳಿಗೆ ಜನ್ಮನೀಡಿದ ಚೀತಾ

ಪಿಟಿಐ
Published 27 ಏಪ್ರಿಲ್ 2025, 22:03 IST
Last Updated 27 ಏಪ್ರಿಲ್ 2025, 22:03 IST
   

ಭೋಪಾಲ್‌: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಚೀತಾ ‘ನಿರ್ವಾ’ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಮುಖ್ಯಮಂತ್ರಿ ಮೋಹನ ಯಾದವ್ ಭಾನುವಾರ ಘೋಷಿಸಿದ್ದಾರೆ.

ಇವುಗಳ ಜನನದೊಂದಿಗೆ ಉದ್ಯಾನದಲ್ಲಿ ಚೀತಾ ಹಾಗೂ ಮರಿಗಳ ಸಂಖ್ಯೆ 29ಕ್ಕೆ ಏರಿದಂತಾಗಿದೆ. ಈಗ ದೇಶದಲ್ಲಿನ ಚೀತಾಗಳ ಒಟ್ಟು ಸಂಖ್ಯೆ 31 ಆಗಿದೆ.

‘5 ವರ್ಷದ ನಿರ್ವಾ, ಐದು ಮರಿಗಳಿಗೆ ಜನ್ಮ ನೀಡಿರುವುದು ಚೀತಾ ಪ್ರಾಜೆಕ್ಟ್‌ ಯಶಸ್ವಿಯಾಗಿರುವುದನ್ನು ಹಾಗೂ ಭಾರತದ ಜೀವವೈವಿಧ್ಯದ ಶ್ರೀಮಂತಿಕೆಯನ್ನು ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ಯಾದವ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.