ADVERTISEMENT

ಬಿಜೆಪಿಯಿಂದ ರಮಣ್‌ ಸಿಂಗ್‌, ಕಾಂಗ್ರೆಸ್‌ನಿಂದ ಕರುಣಾ ಶುಕ್ಲಾ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 11:57 IST
Last Updated 23 ಅಕ್ಟೋಬರ್ 2018, 11:57 IST
ರಮಣ್‌ ಸಿಂಗ್ ನಾಮಪತ್ರ ಸಲ್ಲಿಕೆ
ರಮಣ್‌ ಸಿಂಗ್ ನಾಮಪತ್ರ ಸಲ್ಲಿಕೆ   

ರಾಯಪುರ:ಛತೀಸಗಡ ಮುಖ್ಯಮಂತ್ರಿ ರಮಣ್‌ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಸೋದರ ಸಂಬಂಧಿ ಕರುಣಾ ಶುಕ್ಲಾ ಮಂಗಳವಾರ ನಾಮಪತ್ರ ಸಲ್ಲಿಸಿದರು.

ರಾಜ್‌ನಂದ್ಗಾವ್‌ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರಮಣ್‌ ಸಿಂಗ್ ಸ್ಪರ್ಧಿಸಿದ್ದಾರೆ. ಇವರ ಎದುರು ಕಾಂಗ್ರೆಸ್ ಪಕ್ಷದಿಂದ ಕರುಣಾ ಶುಕ್ಲಾ ಸ್ಪರ್ಧಿಸಿದ್ದಾರೆ.

ರಮಣ್ ಸಿಂಗ್‌ ನಾಮಪತ್ರ ಸಲ್ಲಿಸುವ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯಾನಾಥ್ ಹಾಗೂ ಛತೀಸಗಡ ಬಿಜೆಪಿ ಘಟಕದ ಅಧ್ಯಕ್ಷ ಧರಮ್‌ಲಾಲ್‌ ಕೌಶಿಕ್‌ ಉಪಸ್ಥಿತಿರಿದ್ದರು. ಇದೇ ವೇಳೆಇತರೆ 6 ವಿಧಾನಸಭಾ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ADVERTISEMENT

ರಮಣ್‌ ಸಿಂಗ್‌ ನಾಮಪತ್ರ ಸಲ್ಲಿಸುವ ಮುನ್ನರಾಜ್‌ನಂದ್ಗಾವ್‌ ನಗರದಲ್ಲಿ ರೋಡ್‌ ಶೊ ನಡೆಸಿದರು.

ಛತೀಸಗಡದಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಯ ಮತದಾನ ನವೆಂಬರ್ 12ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಆಕ್ಟೋಬರ್ 23 ಕಡೆಯ ದಿನ. ಒಟ್ಟು 7 ಜಿಲ್ಲೆಗಳಿಂದ 12 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಉಂಟಾಗಿದ್ದು ಉಭಯ ಪಕ್ಷಗಳು ಎಲ್ಲಾ 12 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿವೆ.s.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.