ADVERTISEMENT

Chhattisgarh Final Result| ಕಾಂಗ್ರೆಸ್‌ ಕೋಟೆಯಲ್ಲಿ ಅರಳಿದ ಕಮಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2023, 10:57 IST
Last Updated 3 ಡಿಸೆಂಬರ್ 2023, 10:57 IST
<div class="paragraphs"><p>ಬಿಜೆಪಿ (ಪ್ರಾತಿನಿಧಿಕ ಚಿತ್ರ)</p></div>

ಬಿಜೆಪಿ (ಪ್ರಾತಿನಿಧಿಕ ಚಿತ್ರ)

   

ರಾಯಪುರ: ಛತ್ತೀಸಗಢ ಚುನಾವಣೆಯ ಅಂತಿಮ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

ಛತ್ತೀಸಗಢದಲ್ಲಿ ಕಾಂಗ್ರೆಸ್ ಪಕ್ಷವು ಅಚ್ಚರಿಯ ಸೋಲು ಕಂಡಿದೆ. ಇಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಬರಬಹುದು ಎಂದಿದ್ದವು. ಆದರೆ ಸಮೀಕ್ಷೆಗಳು ತಲೆಕೆಳಗಾಗಿ ಬಿಜೆಪಿ 54 ರಲ್ಲಿ ಹಾಗೂ ಕಾಂಗ್ರೆಸ್ 36 ರಲ್ಲಿ ಗೆದ್ದಿದೆ. ಜಿಜಿಪಿ1. ಒಟ್ಟು ಸ್ಥಾನ 90, ಬಹುಮತಕ್ಕೆ 46.

ADVERTISEMENT

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ 68, ಬಿಜೆಪಿ 15 ಹಾಗೂ ಜಿಜಿಪಿ 2ರಲ್ಲಿ ಗೆಲುವು ಸಾಧಿಸಿದ್ದರು. ಪಕ್ಷೇತರ ಅಭ್ಯರ್ಥಿಗಳು 7 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರು.

ರಾಯಪುರ: ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾರ್ಯಕ್ರಮಗಳು ಛತ್ತೀಸಗಢದಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾರಣವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

‘ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಉತ್ತಮ ಯಶಸ್ಸನ್ನು ಪಡೆದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಜನರು ಬೆಂಬಲಿಸಿದ್ದಾರೆ‘ ಎಂದು ತಿಳಿಸಿದ್ದಾರೆ.

ಛತ್ತೀಸಗಢ ಚುನಾವಣಾ ಫಲಿತಾಂಶ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ ಹಿಂದಿ ಪ್ರಧಾನ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಜನಾದೇಶ ನೀಡಿರುವುದಕ್ಕೆ ಧನ್ಯವಾದ‘ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಗೆಲುವಿಗೆ ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮ ಮತ್ತು ಪ್ರಧಾನಿ ಮೋದಿಯವರ ಕಲ್ಯಾಣ ಕಾರ್ಯಕ್ರಮಗಳು ಕಾರಣ ಎಂದು ಮಾಜಿ ರಾಜ್ಯಸಭಾ ಸಂಸದ ಓಂ ಮಾಥುರ್ ಹೇಳಿದ್ದಾರೆ

ಛತ್ತೀಸಗಢ ವಿಧಾನಸಭೆ ಚುನಾವಣೆಯ ಈವರೆಗಿನ ಶೇಕಡಾವಾರು ಫಲಿತಾಂಶದ ಪ್ರಕಾರ ಬಿಜೆಪಿಗೆ ಶೇ 46. 2, ಕಾಂಗ್ರೆಸ್‌ಗೆ ಶೇ 42.7 ಹಾಗೂ ಜಿಜಿಪಿಗೆ ಶೇ 4ರಷ್ಟು ವೋಟಿಂಗ್‌ ಆಗಿದೆ. ಪಕ್ಷೇತರರು ಶೇ 7.1ರಷ್ಟು ಮತ ಪಡೆದಿದ್ದಾರೆ.

ಈಗಿನ ಟ್ರೆಂಡ್‌ ಪ್ರಕಾರ ಬಿಜೆಪಿ 55, ಕಾಂಗ್ರೆಸ್‌ 35, ಬಿಎಸ್‌ಪಿ ಮತ್ತು ಪಕ್ಷೇತರ ಅಭ್ಯರ್ಥಿ ಸೊನ್ನೆ ಸುತ್ತಿದ್ದಾರೆ.

ಈಗಿನ ಟ್ರೆಂಡ್‌ ಪ್ರಕಾರ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ ಫಲಿತಾಂಶ;

ರಾಯಪುರ: ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ದಾಪುಗಾಲು ಇಡುತ್ತಿದ್ದು. ಈ ಮೂಲಕ ಛತ್ತೀಸಗಢದಲ್ಲಿ ಬಿಜೆಪಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ರಾಜ್ಯದಲ್ಲಿ ಗೆಲ್ಲುವ ನಿರೀಕ್ಷಯಲ್ಲಿದ್ದ ಕಾಂಗ್ರೆಸ್‌ನ ಚುನಾವಣಾ ಫಲಿತಾಂಶ ತಲೆಕಳಗೆ ಮಾಡಿದೆ. 24 ಸ್ಥಾನಗಳ ಅಂತರಲ್ಲಿ ಬಿಜೆ‍ಪಿ ಅಂತರ ಕಾಯ್ದುಕೊಂಡಿದೆ.

ಛತ್ತೀಸ್‌ಗಢದ ಪ್ರಮುಖ ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತವರು ಪಟಾಣ್‌ನಿಂದ ಕಣಕ್ಕಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ರಾಜನಂದಗಾಂವ್‌ನಿಂದ ಸ್ಪರ್ಧಿಸಿದ್ದಾರೆ, ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಅಂಬಿಕಾಪುರದಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯ ವಿಜಯ್ ಬಾಘೆಲ್ ಅವರು ಭೂಪೇಶ್ ಬಘೇಲ್ ವಿರುದ್ಧ ಕಣಕ್ಕಿಳಿದಿದ್ದಾರೆ.

ಛತ್ತೀಸ್‌ಗಢದ 90 ಸ್ಥಾನಗಳ ವಿಧಾನಭಾ ಚುನಾಣೆಗೆ ನವೆಂಬರ್ 7 ಮತ್ತು ನವೆಂಬರ್ 17ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಕ್ರಮವಾಗಿ ಶೇಕಡಾ 78 ಮತ್ತು 75.88 ರಷ್ಟು ಮತದಾನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.