ADVERTISEMENT

ಛತ್ತೀಸಗಢದಲ್ಲಿ ಎನ್‌ಕೌಂಟರ್‌: ನಕ್ಸಲ್ ಮುಖಂಡ ದೀಲಿಪ್‌ ಬೇಡ್ಜಾ ಹತ್ಯೆ

ಪಿಟಿಐ
Published 17 ಜನವರಿ 2026, 9:34 IST
Last Updated 17 ಜನವರಿ 2026, 9:34 IST
<div class="paragraphs"><p>ನಕ್ಸಲ್  ಕಾರ್ಯಾಚರಣೆ  </p></div>

ನಕ್ಸಲ್ ಕಾರ್ಯಾಚರಣೆ

   

–ಪಿಟಿಐ ಚಿತ್ರ 

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ದಿಲೀಪ್ ಬೇಡ್ಜಾ ಸೇರಿ ಇಬ್ಬರು ನಕ್ಸಲರು ಹತರಾಗಿದ್ದಾರೆ.

ADVERTISEMENT

ಇಲ್ಲಿನ ವಾಯವ್ಯ ಭಾಗದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಶನಿವಾರ ಬೆಳಗ್ಗೆ ಎನ್‌ಕೌಂಟರ್‌ ನಡೆಸಿದ್ದವು. ಈ ವೇಳೆ ನಕ್ಸಲರು ಪ್ರತಿದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಿರಿಯ ನಕ್ಸಲ್‌ ದಿಲೀಪ್ ಬೇಡ್ಜಾ ಮೃತಪಟ್ಟಿದ್ದಾರೆ. ಹತರಾದ ಮತ್ತೊಬ್ಬ ನಕ್ಸಲ್‌ ಗುರುತು ಇನ್ನೂ ದೃಢಪಡಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿಲೀಪ್ ಬೇಡ್ಜಾ ಸುಳಿವು ಕೊಟ್ಟವರಿಗೆ ಪೊಲೀಸ್‌ ಇಲಾಖೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು.

ಛತ್ತೀಸಗಢ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹಾಗೂ ಜಿಲ್ಲಾ ಮೀಸಲು ಪೊಲೀಸ್‌ (ಡಿಆರ್‌ಜಿ) ಸಿಆರ್‌ಪಿಎಫ್‌ನ ಕೋಬ್ರಾ ‍ಪಡೆಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ಸ್ಥಳದಲ್ಲಿ ಹಲವು ಎಕೆ–47 ಗನ್‌ಗಳು, ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.