ಸಂಗ್ರಹ ಚಿತ್ರ
ಪಿಟಿಐ
ದಂತೇವಾಡ: ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ ಇಂದು (ಬುಧವಾರ) ಇಬ್ಬರು ಮಹಿಳೆಯರು ಸೇರಿ 12 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅವರಲ್ಲಿ ಒಂಬತ್ತು ಮಂದಿ ನಕ್ಸಲರಿಗೆ ₹28.50 ಲಕ್ಷ ಇನಾಮು ಘೋಷಿಸಲಾಗಿತ್ತು.
12 ನಕ್ಸಲರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪಡೆ ಮುಂದೆ ಶರಣಾದರು.
2020 ರ ಜೂನ್‌ನಲ್ಲಿ ಪ್ರಾರಂಭಿಸಲಾದ 'ಲೋನ್ ವರ್ರಾಟು' (ನಿಮ್ಮ ಮನೆ/ಗ್ರಾಮಕ್ಕೆ ಹಿಂತಿರುಗಿ) ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,005 ನಕ್ಸಲರು ಶರಣಾಗಿದ್ದಾರೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ.
ದೇವಾಡ ಪೊಲೀಸರ ಲೋನ್ ವರ್ರಾಟು ಅಭಿಯಾನದಡಿಯಲ್ಲಿ ಶರಣಾದ ಮಾವೋವಾದಿಗಳ ಸಂಖ್ಯೆ 1,000 ದಾಟಿದೆ.
ಶರಣಾದವರು ರಾಜ್ಯ ಸರ್ಕಾರದ ಪುನರ್ವಸತಿ ಯೋಜನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಂತೇವಾಡ ಹೊರತುಪಡಿಸಿ, ಸುಕ್ಮಾ, ಬಿಜಾಪುರ ಮತ್ತು ನಾರಾಯಣಪುರ ಜಿಲ್ಲೆಗಳಿಗೆ ಸೇರಿದ ನಕ್ಸಲರಾಗಿದ್ದಾರೆ. ಏಳು ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ಪ್ರದೇಶದಲ್ಲಿ 2024ರಲ್ಲಿ ಒಟ್ಟು 792 ನಕ್ಸಲರು ಶರಣಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.