ADVERTISEMENT

ಛತ್ತೀಸಗಢ: 26 ನಕ್ಷಲರು ಶರಣು

ಪಿಟಿಐ
Published 7 ಜನವರಿ 2026, 14:43 IST
Last Updated 7 ಜನವರಿ 2026, 14:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ, ಏಳು ಮಹಿಳೆಯರೂ ಸೇರಿದಂತೆ ಒಟ್ಟು 26 ನಕ್ಸಲರು ಬುಧವಾರ ಶರಣಾಗಿದ್ದಾರೆ. ಇವರಲ್ಲಿ 13 ಮಂದಿಯ ಕುರಿತು ಸುಳಿವು ನೀಡಿದವರಿಗೆ ಒಟ್ಟಾಗಿ ₹65 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು.

ಹಿರಿಯ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ‌ ಅಧಿಕಾರಿಗಳ (ಸಿಆರ್‌ಪಿಎಫ್‌) ಮುಂದೆ ನಕ್ಸಲರು ಶರಣಾದರು.

ಇವರು, ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ನಕ್ಸಲ್‌ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರು. ದಕ್ಷಿಣ ಬಸ್ತಾರ್ ವಿಭಾಗ, ಮಾಡ್‌ ವಿಭಾಗ ಹಾಗೂ ಆಂಧ್ರಪ್ರದೇಶ– ಒಡಿಶಾ ಗಡಿಯಲ್ಲಿ ಸಕ್ರಿಯರಾಗಿದ್ದರು ಎಂದು ಪೊಲೀಸರು ತಿಳಿಸಿದರು. 

ADVERTISEMENT

ಶರಣಾದವರಿಗೆ ತಲಾ ₹50,000 ನೆರವು ನೀಡಲಾಗಿದ್ದು, ಪುನರ್‌ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.