ADVERTISEMENT

ಛತ್ತೀಸಗಢ: ಭದ್ರತಾ ಪಡೆ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತ

ಪಿಟಿಐ
Published 28 ಸೆಪ್ಟೆಂಬರ್ 2025, 9:34 IST
Last Updated 28 ಸೆಪ್ಟೆಂಬರ್ 2025, 9:34 IST
<div class="paragraphs"><p>–ಪಿಟಿಐ ಚಿತ್ರ&nbsp;</p></div>
   

–ಪಿಟಿಐ ಚಿತ್ರ 

ಕಂಕೇರ್; ಛತ್ತೀಸಗಢದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಂಕೇರ್ ಮತ್ತು ಗರಿಯಾಬಂದ್ ಜಿಲ್ಲೆಗಳ ಗಡಿಯಲ್ಲಿರುವ ರಾವಾಸ್ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಬೆಳಿಗ್ಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಕಂಕೇರ್ ಮತ್ತು ಗರಿಯಾಬಂದ್‌ನ ರಾಜ್ಯ ಪೊಲೀಸ್ ಘಟಕವಾದ ಜಿಲ್ಲಾ ಮೀಸಲು ಪಡೆಗೆ (ಡಿಆರ್‌ಜಿ) ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ. ಎನ್‌ಕೌಂಟರ್ ಸ್ಥಳದಿಂದ ಇಲ್ಲಿಯವರೆಗೆ ಮೂವರು ನಕ್ಸಲರ ಮೃತದೇಹಗಳು ಮತ್ತು ಮೂರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತ ನಕ್ಸಲರನ್ನು ಸೀತಾನದಿ/ರಾವಸ್ ಪ್ರದೇಶ ಸಮಿತಿಯ ಕಾರ್ಯದರ್ಶಿ ಶ್ರವಣ್ ಅಲಿಯಾಸ್ ವಿಶ್ವನಾಥ್, ನಗರಿ ಪ್ರದೇಶ ಸಮಿತಿಯ ರಾಜೇಶ್ ಅಲಿಯಾಸ್ ರಾಕೇಶ್ ಹೇಮ್ಲಾ ಮತ್ತು ಮೈನ್‌ಪುರ–ನುವಾಪಢ ರಕ್ಷಣಾ ತಂಡದ ಬಸಂತಿ ಕುಂಕ್ಜಮ್ ಅಲಿಯಾಸ್ ಹಿಡ್ಮೆ ಎಂದು ಮೇಲ್ನೋಟಕ್ಕೆ ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೂವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಸ್ವಯಂ ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಒಂದು 303 ರೈಫಲ್, 12 ಬೋರ್‌ ಗನ್ ಮತ್ತು ನಕ್ಸಲರಿಗೆ ಸಂಬಧಿಸಿದ ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.

ಇದೂ ಸೇರಿದಂತೆ ಈ ವರ್ಷ ಛತ್ತೀಸಗಢದಲ್ಲಿ 225 ನಕ್ಸಲರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಆ ಪೈಕಿ 223 ಮಂದಿಯನ್ನು ಕಂಕೇರ್ ಸೇರಿದಂತೆ 7 ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ವಿಭಾಗದಲ್ಲೇ ಕೊಲ್ಲಲಾಗಿದೆ. ಉಳಿದ 27 ಮಂದಿಯನ್ನು ರಾಯಪುರ ವಿಭಾಗದ ಗರಿಯಾಬಂದ್ ಜಿಲ್ಲೆಯಲ್ಲಿ ಕೊಲ್ಲಲಾಗಿದೆ.

ಇಬ್ಬರನ್ನು ದುರ್ಗ್ ವಿಭಾಗದ ಮೊಹ್ಲಾ–ಮನ್ಪುರ್–ಅಂಬರಘಡ ಜಿಲ್ಲೆಯಲ್ಲಿ ಕೊಲ್ಲಲಾಗಿದೆ.

ಸೆಪ್ಟೆಂಬರ್ 22ರಂದು ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಜು ದಾದಾ ಅಲಿಯಾಸ್ ಕಟ್ಟಾ ರಾಮಚಂದ್ರ ರೆಡ್ಡಿ (63) ಮತ್ತು ಕೋಸಾ ದಾದಾ ಅಲಿಯಾಸ್ ಕದರಿ ಸತ್ಯನಾರಾಯಣ ರೆಡ್ಡಿ (67) ಎಂಬ ಇಬ್ಬರು ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.