ಪಿ. ಚಿದಂಬರಂ
ಕೃಪೆ: ಪಿಟಿಐ
ನವದೆಹಲಿ: ‘ದೇಶದಲ್ಲಿಯೇ ಭಯೋತ್ಪಾದಕರು ತಯಾರಾಗುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಹಂಚಿಕೊಂಡ ಪೋಸ್ಟ್‌ಗೆ ಬಿಜೆಪಿ ನಾಯಕರು ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಚಿದಂಬರಂ ಅವರು ಭಯೋತ್ಪಾದಕರ ಪರವಾಗಿ ಮಾತನಾಡುತ್ತಿದ್ದಾರೆ’ ಎಂದೂ ದೂರಿದ್ದಾರೆ.
ಚಿದಂಬರಂ ಅವರು ದೆಹಲಿ ಸ್ಫೋಟದ ಕುರಿತು ತಮ್ಮ ಪೋಸ್ಟ್‌ನಲ್ಲಿ ಪ್ರಸ್ತಾಪಿಸಿರಲಿಲ್ಲ. ಆದರೆ, ‘ಯಾವ ಕಾರಣಕ್ಕಾಗಿ ಭಾರತೀಯರು ಭಯೋತ್ಪಾದಕರಾಗುತ್ತಿದ್ದಾರೆ. ಭಯೋತ್ಪಾದಕರು ಯಾರು ಎಂದು ಭಾರತ ಸರ್ಕಾರಕ್ಕೆ ತಿಳಿದಿರುವುದರಿಂದಲೇ, ಸರ್ಕಾರವು ದಿವ್ಯ ಮೌನವಹಿಸಿದೆ’ ಎಂದು ಬುಧವಾರ ಪೋಸ್ಟ್ ಹಂಚಿಕೊಂಡಿದ್ದರು.
‘ಅವರು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ. ಛೀ..ಛೀ.. ನೀವು (ಚಿದಂಬರಂ) ಎಲ್ಲ ಮಿತಿಗಳನ್ನೂ ಮೀರಿದ್ದೀರಿ. ಮನಮೋಹನ್ ಸಿಂಗ್ ಅವರ ನಾಟಕವನ್ನೂ ಮೀರಿಸಿದಿರಿ. ನೀವೇ ಯಾಸಿನ್ ಮಲ್ಲಿಕ್ ಅವರನ್ನು ಮನಮೋಹನ್ ಸಿಂಗ್ ಅವರ ಜೊತೆ ಕುಳ್ಳಿರಿಸಿದ್ದು’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.
‘ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರವರೆಗೂ ನಿಮ್ಮ ಕೊಡುಗೆಯನ್ನು ನೀವು ನೆನಪಿಸಿಕೊಳ್ಳಬೇಕು. ನಿಮ್ಮ ಪಕ್ಷದ ಓಲೈಕೆ ರಾಜಕಾರಣವೇ ಇದಕ್ಕೆಲ್ಲ ಕಾರಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.