ADVERTISEMENT

ಬಾಲಕಿ ಮೇಲೆ ವಿವಾಹಿತನಿಂದ ಅತ್ಯಾಚಾರ: ಜನಿಸಿದ ಕೆಲವೇ ಗಂಟೆಗಳಲ್ಲಿ ಮಗು ಸಾವು

ಪಿಟಿಐ
Published 7 ಸೆಪ್ಟೆಂಬರ್ 2025, 15:51 IST
Last Updated 7 ಸೆಪ್ಟೆಂಬರ್ 2025, 15:51 IST
<div class="paragraphs"><p>ಅತ್ಯಾಚಾರ</p></div>

ಅತ್ಯಾಚಾರ

   

ಸಾಂದರ್ಭಿಕ ಚಿತ್ರ

ಬರೇಲಿ: ‘11 ವರ್ಷದ ಬಾಲಕಿ ಮೇಲೆ ವಿವಾಹಿತ ವ್ಯಕ್ತಿಯೊಬ್ಬ ನಿರಂತರ ಅತ್ಯಾಚಾರವೆಸಗಿದ್ದು, ಬಾಲಕಿಯು ಅವಧಿಪೂರ್ವ ಮಗುವಿನ ಜನ್ಮನೀಡಿದ ಕೆಲವೇ ಗಂಟೆಗಳಲ್ಲಿ ಮಗು ಸತ್ತು ಹೋಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಬಾಲಕಿ ಏಳು ತಿಂಗಳ ಗರ್ಭಾವಸ್ಥೆಯಲ್ಲಿದ್ದಾಗ ಮಗು ಜನಿಸಿದೆ’ ಎಂದು ಹೇಳಿದ್ದಾರೆ.

‘31 ವರ್ಷದ ಆರೋಪಿ, ಎರಡು ಮಕ್ಕಳ ತಂದೆಯಾಗಿರುವ ರಷೀದ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ, ನಂತರ ನಿರಂತರ ಬೆದರಿಕೆಯೊಡ್ಡಿ ಲೈಂಗಿಕ ಕ್ರಿಯೆ ನಡೆಸಿದ್ದನು. ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಆರೋಪಿ– ಮಗುವಿನ ಡಿಎನ್‌ಎ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ನವಾಬ್‌ಗಂಜ್‌ ಠಾಣಾಧಿಕಾರಿ ಅರುಣ್‌ ಕುಮಾರ್‌ ಶ್ರೀ ವಾತ್ಸವ ತಿಳಿಸಿದ್ದಾರೆ.

‘ಆರರಿಂದ ಏಳು ತಿಂಗಳ ಹಿಂದೆ ಮನೆಗೆ ಬಂದಿದ್ದ ಆರೋಪಿಯು ತಂಗಿಗೆ ಹಣ್ಣು ನೀಡುವುದಾಗಿ ಆತನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ, ಕೊಲ್ಲುವುದಾಗಿ ತಿಳಿಸಿದ್ದ. ನಂತರ ವಿಡಿಯೊ ಮಾಡಿ, ಬೆದರಿಸಿ ನಿರಂತರ ಅತ್ಯಾಚಾರವೆಸಗಿದ್ದ’ ಎಂದು ಸಂತ್ರಸ್ತೆಯ ಅಣ್ಣ ತಿಳಿಸಿದ್ದಾರೆ.

ಬಾಲಕಿಯು ಗುರುವಾರ ತೀವ್ರ ಹೊಟ್ಟೆನೋವು ಎಂದು ತಿಳಿಸಿದ್ದರಿಂದ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಕುಟುಂಬಸ್ಥರು ಅಲ್ಟ್ರಾಸೌಂಡ್‌ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಬಾಲಕಿಯು ಏಳು ತಿಂಗಳ ಗರ್ಭಿಣಿಯಾಗಿರುವುದು ಕಂಡುಬಂದಿದೆ. ನಂತರ ಆಕೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಿದ್ದು, ಅದೇ ದಿನ ಮಗುವಿಗೆ ಜನ್ಮ ನೀಡಿದ್ದಾಳೆ.

‘ಸಣ್ಣ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ದರಿಂದ ಬಾಲಕಿ ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದಳು, ನಿರಂತರ ನಿಗಾ ವಹಿಸಿ ಚಿಕಿತ್ಸೆ ಕೊಟ್ಟ ಬಳಿಕ ಪರಿಸ್ಥಿತಿ ಸುಧಾರಿಸಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ತ್ರಿಭುವನ್‌ ಪ್ರಸಾದ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.