ಬೀಜಿಂಗ್: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ 90ನೇ ಜನ್ಮ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಸರ್ಕಾರದ ಅಧಿಕಾರಿಗಳ ನಡೆಯ ವಿರುದ್ಧ ಚೀನಾ ಸರ್ಕಾರವು ಪ್ರತಿಭಟನೆ ದಾಖಲಿಸಿದೆ.
‘ಟಿಬೆಟ್‌ಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಲ್ಲಿ ಭಾರತವು ಚೀನಾದ ನಡೆಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಒತ್ತಿ ಹೇಳಿದೆ.
‘ಟಿಬೆಟ್ ವಿಚಾರದಲ್ಲಿ ಚೀನಾವು ನಿರಂತರವಾಗಿ ಸ್ಪಷ್ಟ ನಿಲುವು ಹೊಂದಿದ್ದು, ಎಲ್ಲರಿಗೂ ತಿಳಿದಿರುವ ವಿಚಾರ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಚೀನಾವು ಟಿಬೆಟ್ ಪ್ರಾಂತ್ಯವನ್ನು ‘ಕ್ಸಿಯಾಂಗ್’ ಎಂದು ಕರೆಯುತ್ತಿದೆ. ಅಲ್ಲಿನ ಸೂಕ್ಷ್ಮ ವಿಷಯಗಳ ಕುರಿತು ಚೀನಾದ ನಿಲುವನ್ನು ಭಾರತವು ಬೆಂಬಲಿಸಬೇಕು. ಪ್ರತ್ಯೇಕತಾವಾದಿ ವಿರೋಧಿ ಸ್ವಭಾವ ಹೊಂದಿರುವ 14ನೇ ದಲೈ ಲಾಮಾ ವಿಚಾರ ಹಾಗೂ ಕ್ಸಿಯಾಂಗ್ ವಿಚಾರದಲ್ಲಿ ಚೀನಾವು ಹೊಂದಿರುವ ಬದ್ಧತೆಯನ್ನು ಗೌರವಿಸಬೇಕು’ ಎಂದು ತಿಳಿಸಿದ್ದಾರೆ.
‘ಚೀನಾದ ಆತಂರಿಕ ವಿಚಾರದಲ್ಲಿ ಭಾರತವು ನಡೆಯು ವಿವೇಕದಿಂದ ಕೂಡಿರಬೇಕು ಮತ್ತು ಮಧ್ಯಪ್ರವೇಶಿಸುವುದನ್ನು ನಿಲ್ಲಿಸಬೇಕು. ಭಾರತದ ನಿಲುವಿನ ವಿರುದ್ಧ ಚೀನಾವು ಪ್ರತಿಭಟನೆಯನ್ನು ದಾಖಲಿಸುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.