ADVERTISEMENT

ಮೂಲಸೌಕರ್ಯ ಅಭಿವೃದ್ಧಿ ವೇಗ ಚೀನಾದ ಆಕ್ರಮಣಶೀಲತೆಗೆ ಸಾಕ್ಷಿ: ವಿ.ಆರ್‌.ಚೌಧರಿ

ಪಿಟಿಐ
Published 8 ಡಿಸೆಂಬರ್ 2021, 14:34 IST
Last Updated 8 ಡಿಸೆಂಬರ್ 2021, 14:34 IST
ವಿ.ಆರ್‌.ಚೌಧರಿ
ವಿ.ಆರ್‌.ಚೌಧರಿ   

ನವದೆಹಲಿ: ತನ್ನ ವಾಯುಪಡೆಯ ಕಾರ್ಯಾಚರಣೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಚೀನಾ ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ. ಚೀನಾದ ಆಕ್ರಮಣಶೀಲತೆಗೆ ಈ ವಿದ್ಯಮಾನವೇ ಸಾಕ್ಷಿ ಎಂದು ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್‌.ಚೌಧರಿ ಬುಧವಾರ ಹೇಳಿದರು.

ಇಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಭಾರತಕ್ಕೆ ಚೀನಾದಿಂದ ದೀರ್ಘಾವಧಿ ಸವಾಲು ಎದುರಾಗುತ್ತದೆ. ಭವಿಷ್ಯದಲ್ಲಿ ಎದುರಾಗಬಹುದಾದ ಇಂಥ ಯಾವುದೇ ಸವಾಲುಗಳಿಗೆ ದೇಶ ತಕ್ಕ ಉತ್ತರ ನೀಡಬಲ್ಲದು ಎಂಬ ಸಂದೇಶವನ್ನು ಜಗತ್ತಿಗೆ ಭಾರತ ರವಾನಿಸುವ ಅಗತ್ಯ ಇದೆ’ ಎಂದರು.

‘ಪಾಕಿಸ್ತಾನ ಹಾಗೂ ಚೀನಾ ತಮ್ಮ ಮಿಲಿಟರಿ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುತ್ತಿವೆ. ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ. ಆರ್ಥಿಕ ನೆರವಿನ ನೆಪದಲ್ಲಿ ಚಿಕ್ಕ ರಾಷ್ಟ್ರಗಳನ್ನು ತನ್ನ ಬಲೆಯೊಳಗೆ ಸಿಲುಕುವಂತೆ ಮಾಡುವ ನೀತಿಯನ್ನು ಚೀನಾ ಅನುಸರಿಸುತ್ತಿದೆ. ಈ ಬಗ್ಗೆ ಭಾರತ ಎಚ್ಚರಿಕೆ ನಡೆ ಅನುಸರಿಸುವುದು ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.