ADVERTISEMENT

ಗಾಲ್ವನ್ ಕಣಿವೆ: ಚೀನಾ ವಾದ ಸಮರ್ಥನೀಯವಲ್ಲ-ವಿದೇಶಾಂಗ ಸಚಿವಾಲಯ

ವಕ್ತಾರ ಶ್ರೀವಾಸ್ತವ ಹೇಳಿಕೆ

ಪಿಟಿಐ
Published 18 ಜೂನ್ 2020, 9:56 IST
Last Updated 18 ಜೂನ್ 2020, 9:56 IST
ಶ್ರೀನಗರ–ಲೇಹ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಎಸ್‌ಎಫ್‌ ಯೋಧರು ಗಸ್ತಿನಲ್ಲಿರುವುದು  –ಪಿಟಿಐ ಚಿತ್ರ
ಶ್ರೀನಗರ–ಲೇಹ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಎಸ್‌ಎಫ್‌ ಯೋಧರು ಗಸ್ತಿನಲ್ಲಿರುವುದು –ಪಿಟಿಐ ಚಿತ್ರ   

ನವದೆಹಲಿ: ‘ಲಡಾಖ್‌ನ ಪೂರ್ವಗಡಿಯಲ್ಲಿನ ಗಾಲ್ವನ್‌ ಕಣಿವೆ ತಮಗೆ ಸೇರಿದ್ದು ಎಂಬ ಚೀನಾದ ಹೇಳಿಕೆ ಉತ್ಪ್ರೇಕ್ಷಿತ ಹಾಗೂ ಸಮರ್ಥನೀಯವೂ ಅಲ್ಲ’ ಎಂದು ಭಾರತದ ವಿದೇಶಾಂಗ ಸಚಿವಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

‘ಗಾಲ್ವನ್‌ ಕಣಿಗೆ ಎಂದಿಗೂ ಚೀನಾಕ್ಕೆ ಸೇರಿದ್ದು’ ಎಂಬುದಾಗಿ ಚೀನಾ ಸೇನೆ ಗುರುವಾರ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ ತಿರುಗೇಟು ನೀಡಿದೆ.

‘ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜೂನ್‌ 6ರಂದು ನಡೆದ ಉಭಯ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಈ ಹೇಳಿಕೆ ವಿರುದ್ಧವಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದರು.

ADVERTISEMENT

ಗಾಲ್ವನ್‌ ಕಣಿವೆಯಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ ಕರ್ನಲ್‌ ಹಾಗೂ 19 ಜನ ಯೋಧರು ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.