ADVERTISEMENT

ಜನರ ಆಯ್ಕೆಗಳನ್ನು ಕಸಿಯಬಾರದು: ರಘುರಾಮ್‌ ರಾಜನ್‌

ಪಿಟಿಐ
Published 1 ಫೆಬ್ರುವರಿ 2024, 16:28 IST
Last Updated 1 ಫೆಬ್ರುವರಿ 2024, 16:28 IST
<div class="paragraphs"><p>ರಘುರಾಮ್‌ ರಾಜನ್‌</p></div>

ರಘುರಾಮ್‌ ರಾಜನ್‌

   

ಜೈಪುರ: ಚುನಾವಣೆಗೆ ಮುನ್ನ ಜಾರಿ ನಿರ್ದೇಶನಾಲಯವನ್ನು ಬಳಸಿ ಕಾರ್ಯಾಚರಣೆ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಮತ್ತು ಈ ನಡೆಯು ಕೇವಲ ರಾಜಕಾರಣಿಗಳಷ್ಟೇ ಅಲ್ಲ, ಎಲ್ಲ ನಾಗರಿಕರೂ ಆತಂಕ ಪಡುವಂತಹುದು ಎಂದು ಆರ್‌ಬಿಐ ನಿವೃತ್ತ ಗವರ್ನರ್‌ ರಘುರಾಮ್‌ ರಾಜನ್‌ ಹೆಳಿದರು.

‘ಜೈಪುರ ಲಿಟರೇಚರ್‌ ಫೆಸ್ಟಿವಲ್‌’ನಲ್ಲಿ ಗುರುವಾರ ಮಾತನಾಡಿದ ಅವರು, ಜಾರ್ಖಂಡ್‌ನಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್‌ ಸೊರೇನ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬುಧವಾರ ಅವರನ್ನು ಬಂಧಿಸಿದ ಪ್ರಕರಣವನ್ನು ಉಲ್ಲೇಖಿಸಿ, ‘ಯಾರನ್ನಾದರೂ ಬಂಧಿಸವುದೆಂದರೆ ಅವರನ್ನು ಜೈಲಿಗೆ ಹಾಕುವುದಷ್ಟೇ ಆಗಿರುವುದಿಲ್ಲ. ಬದಲಾಗಿ ಜನರಿಗೆ ವಿರೋಧ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗಟ್ಟಿದರೆ ಜನರಿಗೆ ಆಯ್ಕೆಗಳೆಲ್ಲಿರುತ್ತವೆ? ಯಾವಾಗ ಜನರ ಆಯ್ಕೆಯ ಪ್ರಶ್ನೆ ಎದುರಾಗುತ್ತದೋ, ಆಗ ಅದು ಕೇವಲ ರಾಜಕಾರಣಿಗಳ ಪ್ರಶ್ನೆಯಷ್ಟೇ ಆಗಿರುವುದಿಲ್ಲ. ಜನರ ಸಮಸ್ಯೆಯೂ ಆಗಿರುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.