ADVERTISEMENT

'ಚೌಕೀದಾರ್' ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ: ಪ್ರಿಯಾಂಕಾ ಗಾಂಧಿ ವಾದ್ರಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 9:12 IST
Last Updated 24 ಮಾರ್ಚ್ 2019, 9:12 IST
   

ಲಖನೌ: ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ₹10,000 ಕೋಟಿ ಬರುವುದು ಬಾಕಿ ಇದೆ. ಈ ವಿಷಯವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಹಣ ಸಿಕ್ಕಿದರೆ ರೈತರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆಹಾರ ಮತ್ತು ಮುಂದಿನ ಬೆಳೆ ಬೆಳೆಯುವುದಕ್ಕಾಗಿ ಬಳಸುತ್ತಿದ್ದರು.

ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಪ್ರಿಯಾಂಕಾ, ಚೌಕೀದಾರ್ ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದಿದ್ದಾರೆ.

ಲಖನೌದಲ್ಲಿರುವ ಕಬ್ಬು ಅಭಿವೃದ್ಧಿಆಯುಕ್ತರ ಕಚೇರಿಯಲ್ಲಿನ ಮಾರ್ಚ್ 22ರ ದಾಖಲೆ ಪ್ರಕಾರ ರಾಜ್ಯದ ಸಕ್ಕರೆ ಕಾರ್ಖಾನೆಗಳು2018-19ರಲ್ಲಿ ಕಬ್ಬು ಕಟಾವ್ ಮಾಡುತ್ತಿದ್ದ ತಿಂಗಳಲ್ಲಿ (ಅಕ್ಟೋಬರ್- ಸಪ್ಟೆಂಬರ್) ರೈತರಿಂದ ₹24,888.65 ಕೋಟಿ ಮೌಲ್ಯದ ಕಬ್ಬು ಖರೀದಿಸಿತ್ತು.ಸಾದಾ ಕಬ್ಬು ಕ್ವಿಂಟಾಲ್‍ಗೆ ₹315 ಮತ್ತು ಶೀಘ್ರ ಬೆಳೆ ನೀಡುವ ತಳಿಯ ಕಬ್ಬುಗಳಿಗೆ ಕ್ವಿಂಟಾಲ್‍ಗೆ ₹325 ರಂತೆ ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡಿತ್ತು.

ADVERTISEMENT

ಕಬ್ಬು ನೀಡಿದ 14 ದಿನಗಳೊಳಗೆ ಕಬ್ಬು ಬೆಳೆಗಾರರಿಗೆ ಸರ್ಕಾರ ₹22,175.21ಪಾವತಿ ಮಾಡಬೇಕಿತ್ತು. ಆದರೆ ಅವರಿಗೆ ಸಿಕ್ಕಿದ್ದು ₹12,339.04 ಕೋಟಿ.2017-18ರಲ್ಲಿ ಬಾಕಿಯಿದ್ದ ಹಣ ₹238.81 ಕೋಟಿ. ಹಾಗಾಗಿ ಒಟ್ಟು ₹10,074.98 ಕೋಟಿ ಹಣ ರೈತರಿಗೆ ಸಿಗಲು ಬಾಕಿ ಇದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

₹10,074.98 ಕೋಟಿಯಲ್ಲಿ ಮೀರತ್, ಭಾಗ್‍ಪಥ್, ಖೈರಾನಾ, ಮುಜಾಫರ್‌ನಗರ್, ಬಿನೋಜ್ ಮತ್ತು ಸಹರಣ್‍ಪುರ್‌ನಲ್ಲಿರುವ ಮಿಲ್‍ಗಳಿಂದ ರೈತರಿಗೆಶೇ.45ಕ್ಕಿಂತಲೂ ಹೆಚ್ಚು ಹಣ ಬರಲು ಬಾಕಿ ಇದೆ. ಈ ಪ್ರದೇಶಗಳಲ್ಲಿ ಏಪ್ರಿಲ್ 11 ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.