ಸಾಂದರ್ಭಿಕ ಚಿತ್ರ
ನವದೆಹಲಿ: ‘ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್’ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷಾ ದಿನಾಂಕ ಪ್ರಕಟಿಸಿದೆ.
10ನೇ ತರಗತಿ ಪರೀಕ್ಷೆ ಫೆಬ್ರುವರಿ 17ರಿಂದ ಮಾರ್ಚ್ 30ರವರೆಗೆ ನಡೆಯಲಿದ್ದು, 12ನೇ ತರಗತಿ ಪರೀಕ್ಷೆ ಫೆಬ್ರುವರಿ 12ರಿಂದ ಏಪ್ರಿಲ್ 6ರ ವರೆಗೆ ನಡೆಯಲಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
‘ಈ ವರ್ಷ ಪರೀಕ್ಷಾ ವೇಳಾಪಟ್ಟಿಯನ್ನು ಶೈಕ್ಷಣಿಕ ವೇಳಾಪಟ್ಟಿಗೆ ಸರಿಹೊಂದುವಂತೆ ಮಾಡಲಾಗಿದ್ದು, ಪ್ರಮುಖ ವಿಷಯಗಳ ನಡುವೆ ವಿದ್ಯಾರ್ಥಿಗಳ ತಯಾರಿಗೆ ಹೆಚ್ಚು ಸಮಯವನ್ನು ಮೀಸಲಿಡಲಾಗಿದೆ’ ಎಂದು ಸಿಐಎಸ್‌ಸಿಇ ಮುಖ್ಯ ಕಾರ್ಯನಿರ್ವಾಹಕ ಜೋಸೆಫ್ ಎಮ್ಯಾನುಯೆಲ್ ತಿಳಿಸಿದ್ದಾರೆ.
ಈ ವರ್ಷ ಐಸಿಎಸ್‌ಇ (10ನೇ ತರಗತಿ) ಪರೀಕ್ಷೆಯನ್ನು ಸುಮಾರು 2.6 ಲಕ್ಷ ಅಭ್ಯರ್ಥಿಗಳು ಬರೆಯಲಿದ್ದು, ಐಎಸ್‌ಸಿ (12ನೇ ತರಗತಿ) ಪರೀಕ್ಷೆಯನ್ನು ಸುಮಾರು 1.5 ಲಕ್ಷ ಅಭ್ಯರ್ಥಿಗಳು ಬರೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.