ADVERTISEMENT

ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಮೇ 2019, 10:14 IST
Last Updated 7 ಮೇ 2019, 10:14 IST
   

ನವದೆಹಲಿ: ಸಿಐಎಸ್‌ಸಿಇಯು 2018–19ನೇ ಸಾಲಿನ 10ನೇ (ಐಸಿಎಸ್‌ಇ) ಮತ್ತು 12ನೇ(ಐಎಸ್‌ಸಿ) ತರಗತಿಗಳ ಫಲಿತಾಂಶ ಪ್ರಕಟಿಸಿದೆ.

ಮಂಗಳವಾರ ಮಧ್ಯಾಹ್ನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್‌www.cisce.orgನಲ್ಲಿ ಫಲಿತಾಂಶ ಲಭ್ಯ.

ಐಎಸ್‌ಸಿಯ ಪರೀಕ್ಷೆಗಳು ಕಳೆದ ಫೆಬ್ರವರಿ 4ರಂದು ಆರಂಭಗೊಂಡು ಮಾರ್ಚ್‌ 25ರಂದು ಕೊನೆಗೊಂಡಿದ್ದವು. ಐಸಿಎಸ್‌ಇಯ ಪರೀಕ್ಷೆಗಳು ಫೆಬ್ರುವರಿ 22ರಂದು ಆರಂಭಗೊಂಡು ಮಾರ್ಚ್‌ 25ರಂದು ಮುಕ್ತಾಯಗೊಂಡಿದ್ದವು.

ADVERTISEMENT

ಐಸಿಎಸ್‌ಇ (10ನೇ ತರಗತಿ)ಯಲ್ಲಿ98.54% ಫಲಿತಾಂಶ ಲಭ್ಯವಾಗಿದೆ. ಐಎಸ್‌ಸಿಯಲ್ಲಿ (12ನೇ ತರಗತಿ) 96.52%ರಷ್ಟು ಫಲಿತಾಂಶ ಸಿಕ್ಕಿದೆ.

ಫಲಿತಾಂಶಗಳನ್ನುಸಿಐಎಸ್‌ಸಿಇ ನೀಡಿರುವ ನಂಬರ್‌ಗಳಿಗೆ ಸಂದೇಶ ಕಳುಹಿಸುವ ಮೂಲಕವೂ ಪಡೆಯಬಹುದು.

ಐಸಿಎಸ್‌ಇ ವಿದ್ಯಾರ್ಥಿಗಳುತಮ್ಮ ಮೊಬೈಲ್‌ನಿಂದ ICSE<Space><Unique Id>ಯನ್ನು 09248082883ಗೆ ಸಂದೇಶ ಕಳುಹಿಸಿ ಫಲಿತಾಂಶ ಪಡೆಯಬಹುದು.

ಐಎಸ್‌ಸಿ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಿಂದ ISC<Space><Unique Id>ಯನ್ನು 09248082883ಗೆ ಸಂದೇಶ ಕಳುಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.