CISCE Class 10 and 12 results announced
ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಬಾಲಕಿಯರು ಮತ್ತು ಬಾಲಕರ ಮಧ್ಯದ ತೇರ್ಗಡೆ ಪ್ರಮಾಣದಲ್ಲಿ ಸ್ವಲ್ಪವೇ ಅಂತರ ಇದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
10ನೇ ತರಗತಿಯಲ್ಲಿ ಬಾಲಕಿಯರ ತೇರ್ಗಡೆ ಪ್ರಮಾಣ ಶೇ 99.45ರಷ್ಟಿದ್ದರೆ, ಬಾಲಕರದ್ದು ಶೇ 98.64ರಷ್ಟಿದೆ. ಇನ್ನು 12ನೇ ತರಗತಿಯಲ್ಲಿ ಬಾಲಕಿಯರು ಶೇ 99.45ರಷ್ಟು ಪಾಸಾಗಿದ್ದರೆ, ಬಾಲಕರು ಶೇ 98.64ರಷ್ಟು ಪಾಸಾಗಿದ್ದಾರೆ.
2,803 ಶಾಲೆಗಳಿಂದ ಒಟ್ಟು 2.52 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರು. ಈ ಪೈಕಿ 2,308 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 12ನೇ ತರಗತಿ ಪರೀಕ್ಷೆಯಲ್ಲಿ 1,460 ಶಾಲೆಗಳಿಂದ 99,551 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 973 ಮಂದಿ ಪರೀಕ್ಷೆಯಲ್ಲಿ ಪಾಸಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.