ADVERTISEMENT

ಮಾ.25–ಏ.14ರ ನಡುವೆ ವಿಮಾನ ಟಿಕೆಟ್ ಕಾಯ್ದಿರಿಸಿದ್ರೆ ವಾಪಸ್ ಸಿಗಲಿದೆ ಪೂರ್ತಿ ಹಣ

ಪಿಟಿಐ
Published 16 ಏಪ್ರಿಲ್ 2020, 14:07 IST
Last Updated 16 ಏಪ್ರಿಲ್ 2020, 14:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ನ ಮೊದಲನೇ ಅವಧಿಯಲ್ಲಿ ವಿಮಾನ ಟಿಕೆಟ್‌ ಕಾಯ್ದಿರಿಸಿರುವ ಪ್ರಯಾಣಿಕರು ಮನವಿ ಸಲ್ಲಿಸಿದರೆ ಪೂರ್ತಿ ಮೊತ್ತ ವಾಪಸ್ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ತಿಳಿಸಿದೆ.

ಮಾರ್ಚ್‌ 25ರಿಂದ ಏಪ್ರಿಲ್‌ 14ರ ಅವಧಿಯಲ್ಲಿ ಟಿಕೆಟ್‌ ಕಾಯ್ದಿರಿಸಿರುವ ಹಾಗೂ ಮೇ 3ರ ವರೆಗೆ ಪ್ರಯಾಣಿಸಲಿದ್ದವರು ಬೇಡಿಕೆ ಸಲ್ಲಿಸಿದರೆ ವಿಮಾನಯಾನ ಕಂಪನಿಗಳು ಹಣ ಮರುಪಾವತಿ ಮಾಡಲಿವೆ. ಟಿಕೆಟ್‌ ರದ್ದತಿ ಶುಲ್ಕಗಳನ್ನೂ ವಿಧಿಸುವುದಿಲ್ಲ ಎಂದೂ ಸಚಿವಾಲಯ ತಿಳಿಸಿದೆ.

ಲಾಕ್‌ಡೌನ್‌ನಿಂದಾಗಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರಿಂದ ಕಾಯ್ದಿರಿಸಿದ ಟಿಕೆಟ್‌ಗಳನ್ನು ರದ್ದು ಮಾಡಿದಲ್ಲಿ ಹಣ ಮರುಪಾವತಿ ಮಾಡುವುದಿಲ್ಲ. ಭವಿಷ್ಯದಲ್ಲಿ ಕೈಗೊಳ್ಳುವ ಪ್ರಯಾಣಕ್ಕೆ ಈ ಹಣ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಪ್ರಾದೇಶಿಕ ವಿಮಾನ ಸೇವೆ ಒದಗಿಸುವ ಕಂಪನಿಗಳು ಹೇಳಿದ್ದವು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರಯಾಣಿಕರು, ಸಾಮಾಜಿಕ ಜಾಲತಾಣಗಳ ಮೂಲಕ ದೂರು ಸಲ್ಲಿಸಿದ್ದರು.

ADVERTISEMENT

ಕೊರೊನಾ ವೈರಾಣು ಸೋಂಕು ತಡೆಯುವ ಸಂಬಂಧ ದೇಶದಲ್ಲಿ ಮೊದಲ ಹಂತದಲ್ಲಿ ಮಾರ್ಚ್‌ 25ರಿಂದ ಏಪ್ರಿಲ್‌ 14ರ ವರೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ಎರಡನೇ ಹಂತದ ಲಾಕ್‌ಡೌನ್ ಏಪ್ರಿಲ್ 15ರಿಂದ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.