ADVERTISEMENT

ವಕೀಲರು ವರ್ಚುವಲ್ ವಿಚಾರಣೆಗೆ ಮೊಬೈಲ್ ಬಳಸಬಹುದು: ಸಿಜೆಐ ಅನುಮತಿ

ಪಿಟಿಐ
Published 19 ಜನವರಿ 2022, 6:29 IST
Last Updated 19 ಜನವರಿ 2022, 6:29 IST
ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ
ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ    

ನವದೆಹಲಿ: ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಇಲ್ಲದ ವಕೀಲರು ವರ್ಚುವಲ್ ವಿಚಾರಣೆಯ ವೇಳೆ ಮೊಬೈಲ್ ಫೋನ್ ಬಳಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ಹೇಳಿದ್ದಾರೆ.

ಆದರೆ ಮೊಬೈಲ್ ಫೋನ್ ಬಳಸುವುದಿದ್ದಲ್ಲಿ, ಸೂಕ್ತವಾದ ಸ್ಥಳದಲ್ಲಿ ಇರಿಸಿ, ವಕೀಲರ ಮುಖ ಸ್ಪಷ್ಟವಾಗಿ ಕಾಣಿಸುವಂತಿರಬೇಕು ಮತ್ತು ಧ್ವನಿ ಸ್ಪಷ್ಟವಾಗಿರಬೇಕು ಎಂದು ಸಿಜೆಐ ಹೇಳಿದ್ದಾರೆ.

ಆನ್‌ಲೈನ್ ಮೂಲಕ ನಡೆಯುವ ವಿಚಾರಣೆಯ ವೇಳೆ ಹಲವು ವಕೀಲರು ಸರಿಯಾಗಿ ಮೊಬೈಲ್ ಬಳಸುತ್ತಿಲ್ಲ ಮತ್ತು ವಿಚಾರಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.

ADVERTISEMENT

ಕೋವಿಡ್ ನಿರ್ಬಂಧಗಳಿರುವುದರಿಂದ ಸುಪ್ರೀಂಕೋರ್ಟ್‌ನಲ್ಲಿ 2020ರ ಮಾರ್ಚ್‌ನಿಂದ ವರ್ಚುವಲ್ ವಿಚಾರಣೆಗಳನ್ನು ನಡೆಸಲಾಗುತ್ತಿದೆ.

ವಿಚಾರಣೆಗೆ ಮೊಬೈಲ್ ಬಳಸಿದರೂ, ಕೋರ್ಟ್ ನಿಯಮಗಳನ್ನು ಪಾಲಿಸಬೇಕು ಮತ್ತು ಅಗತ್ಯವಿದ್ದಲ್ಲಿ ಮೊಬೈಲ್ ಮ್ಯೂಟ್ ಮಾಡುವುದು ಸೇರಿದಂತೆಶಿಷ್ಟಾಚಾರ ಪಾಲಿಸುವಂತೆ ವಕೀಲರಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.