ADVERTISEMENT

ಬಿಹಾರ ಸಿಎಂ ನಿತೀಶ್‌ರನ್ನು ‘ಹಿಡಿದಿಟ್ಟುಕೊಂಡಿರುವ’ ಆಪ್ತರು: ತೇಜಸ್ವಿ ಆರೋಪ

ಪಿಟಿಐ
Published 28 ಡಿಸೆಂಬರ್ 2024, 13:23 IST
Last Updated 28 ಡಿಸೆಂಬರ್ 2024, 13:23 IST
ತೇಜಸ್ವಿ ಯಾದವ್ –ಪಿಟಿಐ ಚಿತ್ರ
ತೇಜಸ್ವಿ ಯಾದವ್ –ಪಿಟಿಐ ಚಿತ್ರ   

ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಹಜವಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ, ಅವರನ್ನು ಕೆಲವು ನಿಕಟವರ್ತಿಗಳು ‘ಹಿಡಿದಿಟ್ಟುಕೊಂಡಿದ್ದಾರೆ’ ಎಂದು ಆರ್‌ಜೆಡಿ ನಾಯಕ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಶನಿವಾರ ಆರೋಪಿಸಿದ್ದಾರೆ.

ತೇಜಸ್ವಿ ಯಾದವ್ ಅವರು ಈ ಹಿಂದೆ ನಿತೀಶ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ‘ನಿತೀಶ್ ಅವರಿಗೆ ಏನೂ ಗೊತ್ತಾಗುತ್ತಿಲ್ಲ. ಅವರು ಬಿಹಾರವನ್ನು ಮುನ್ನಡೆಸಲು ಅಸಮರ್ಥರಾಗಿದ್ದಾರೆ’ ಎಂದು ತೇಜಸ್ವಿ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರವಾಗಿ ಹೇಳಿದ್ದಾರೆ.

‘ನಿತೀಶ್ ಅವರು ತಾವಾಗಿಯೇ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ. ಅವರ ಪಕ್ಷದ ನಾಲ್ಕು ಮಂದಿ ನಾಯಕರು, ದೆಹಲಿಯ ಇಬ್ಬರು ಹಾಗೂ ಇಲ್ಲಿನ ಇನ್ನುಳಿದವರು ನಿತೀಶ್ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರೇ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ತೇಜಸ್ವಿ ಅವರು ಹೇಳಿದ್ದಾರೆ.

ADVERTISEMENT

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂಬ ಆರೋಪವನ್ನು ಉಲ್ಲೇಖಿಸಿ, ಬಿಜೆಪಿಗೆ ನೀಡಿರುವ ಬೆಂಬಲದ ಬಗ್ಗೆ ಮರುಚಿಂತನೆ ನಡೆಸುವಂತೆ ಕೋರಿ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರು ನಿತೀಶ್ ಅವರಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ಸಂಜಯ್ ಝಾ ಅವರಿಂದ ಉತ್ತರ ಬಂದಿದೆ. ಪತ್ರಕ್ಕೆ ಉತ್ತರಿಸಲು ಝಾ ಯಾರು ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.