ಕಾಶಿಪುರ (ಉತ್ತರಾಖಂಡ): ಉತ್ತರಾಖಂಡದಲ್ಲಿ ಬಿಜೆಪಿ ಗೆಲುವು ದಾಖಲಿಸಿದರೂ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿ ಅವರು ಸೋಲು ಕಂಡಿದ್ದಾರೆ.
ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡದ ಹಾಲಿ ಮುಖ್ಯಮಂತ್ರಿಯಾಗಿದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಾಪ್ರಿ ವಿರುದ್ಧ 7,000 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಉತ್ತರಾಖಂಡ ವಿಧಾನಸಭೆಯ 70 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ, ರಾಷ್ಟ್ರೀಯ ಪಕ್ಷ ಜಿಜೆಪಿ ಬಹುಮತದತ್ತ ಸಾಗಿದೆ.
48 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ, ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಯಿತು. 4 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.
ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಶೇ 4.64ರಷ್ಟು ಮತಗಳನ್ನು ಪಡೆದಿದೆ.
ಉತ್ತರಾಖಂಡದಲ್ಲಿ ಫೆಬ್ರುವರಿ 14ರಂದು ಮತದಾನ ನಡೆದಿತ್ತು. ಉತ್ತರಾಖಂಡದಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.
ಚುನಾವಣೆಗೂ ಮುನ್ನ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. 50 ಶಾಸಕರ ಬೆಂಬಲದೊಂದಿಗೆ ಬಿಜೆಪಿಯ ಪುಷ್ಕರ್ ಸಿಂಗ್ ದಾಮಿ ಅವರು ಮುಖ್ಯಮಂತ್ರಿಯಾಗಿದ್ದರು.
ಯಾವ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ
ಎಬಿಪಿ ನ್ಯೂಸ್ – ಸಿವೋಟರ್
ಬಿಜೆಪಿ 26–32
ಕಾಂಗ್ರೆಸ್ 32–38
ಎಎಪಿ 0–2
ಇಟಿಜಿ ರಿಸರ್ಚ್
ಬಿಜೆಪಿ 37–40
ಕಾಂಗ್ರೆಸ್ 29–32
ಎಎಪಿ 0–1
ನ್ಯೂಸ್ 24
ಬಿಜೆಪಿ 43
ಕಾಂಗ್ರೆಸ್ 24
ಎಎಪಿ 0
ನ್ಯೂಸ್‌ಎಕ್ಸ್–ಪೋಲ್‌ಸ್ಟರ್
ಬಿಜೆಪಿ 31–33
ಕಾಂಗ್ರೆಸ್ 33–35
ಎಎಪಿ 0–3
ರಿಪಬ್ಲಿಕ್ ಟಿ.ವಿ
ಬಿಜೆಪಿ 35–39
ಕಾಂಗ್ರೆಸ್ 28–34
ಎಎಪಿ 0–3
ಟೈಮ್ಸ್ ನವ್ – ವಿಇಟಿಒ
ಬಿಜೆಪಿ 37
ಕಾಂಗ್ರೆಸ್ 31
ಎಎಪಿ 1
ಝೀ ನ್ಯೂಸ್– ಡಿಸೈನ್‌ಬಾಕ್ಸ್ಡ್
ಬಿಜೆಪಿ 26–30
ಕಾಂಗ್ರೆಸ್ 35–40
ಎಎಪಿ 0
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.