ADVERTISEMENT

ಕೇರಳ | ಪ್ರತಿಕೂಲ ಹವಾಮಾನ: ಕರಾವಳಿ ರಕ್ಷಣಾ ಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಪಿಟಿಐ
Published 19 ಜೂನ್ 2025, 10:44 IST
Last Updated 19 ಜೂನ್ 2025, 10:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಚ್ಚಿ: ಕೇರಳದ ಕರಾವಳಿಯಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ರಕ್ಷಣಾ ಪಡೆ ಹೆಲಿಕಾಪ್ಟರ್ ಕಾಲೇಜು ಮೈದಾನದಲ್ಲಿ ಗುರುವಾರ ತುರ್ತು ಭೂಸ್ಪರ್ಶ ‌ಮಾಡಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರತಿಕೂಲ ಹವಾಮಾನದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಚೇತಕ್ ಹೆಲಿಕಾಪ್ಟರ್ ಗಸ್ತು ತಿರುಗಿ ಹಿಂತಿರುಗುತ್ತಿದ್ದಾಗ ಪ್ರಕ್ಷುಬ್ಧ ಹವಾಮಾನ ಪರಿಸ್ಥಿತಿಯನ್ನು ಎದುರಿಸಿತು. ಸುರಕ್ಷತಾ ಕ್ರಮವಾಗಿ ಹೆಲಿಕಾಪ್ಟರ್‌ ಅನ್ನು ಎರ್ನಾಕುಲಂ ಜಿಲ್ಲೆಯ ಕೋತಮಂಗಲಂ ಬಳಿಯ ಚೆಲಾಡ್‌ನಲ್ಲಿರುವ ಸೇಂಟ್ ಗ್ರೆಗೋರಿಯೊಸ್ ದಂತ ಕಾಲೇಜಿನ ಫುಟ್‌ಬಾಲ್ ಮೈದಾನದಲ್ಲಿ ಸಿಬ್ಬಂದಿ ಇಳಿಸಿದರು.

ADVERTISEMENT

ಹವಾಮಾನ ಸುಧಾರಿಸಿದ ಬಳಿಕ, ಹೆಲಿಕಾಪ್ಟರ್ ತನ್ನ ಪ್ರಯಾಣವನ್ನು ಪುನರಾರಂಭಿಸಿ ನಡುಂಬಶ್ಶೇರಿಯಲ್ಲಿರುವ ಕೋಸ್ಟ್ ಗಾರ್ಡ್ ಏರ್ ಎನ್‌ಕ್ಲೇವ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.