ADVERTISEMENT

ಕೊಚ್ಚಿಯಲ್ಲಿ ಜಲಜನಕ ಇಂಧನ ಆಧಾರಿತ ಎಲೆಕ್ಟ್ರಿಕ್‌ ಹಡಗುಗಳ ನಿರ್ಮಾಣ- ಸರ್ಬಾನಂದ

ಪಿಟಿಐ
Published 30 ಏಪ್ರಿಲ್ 2022, 14:28 IST
Last Updated 30 ಏಪ್ರಿಲ್ 2022, 14:28 IST
ಕಾರ್ಯಾಗಾರವನ್ನು ಕೇಂದ್ರ ಬಂದರು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್‌ ಉದ್ಘಾಟಿಸಿದರು
ಕಾರ್ಯಾಗಾರವನ್ನು ಕೇಂದ್ರ ಬಂದರು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್‌ ಉದ್ಘಾಟಿಸಿದರು   

ಕೊಚ್ಚಿ: ಪರಿಸರಕ್ಕೆ ಪೂರಕವಾಗಿ ಸರಕು ಸಾಗಣೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಜಲಜನಕ ಆಧಾರಿತ ಎಲೆಕ್ಟ್ರಿಕ್‌ ಹಡಗುಗಳನ್ನು ದೇಶೀಯವಾಗಿ ನಿರ್ಮಾಣ ಮತ್ತು ಅಭಿವೃದ್ಧಿಪಡಿಸುವ ಕಾರ್ಯವನ್ನು ಇಲ್ಲಿನ ಶಿಪ್‌ಯಾರ್ಡ್‌ನಲ್ಲಿ ಆರಂಭಿಸಲಾಗುವುದು ಎಂದು ಕೇಂದ್ರ ಬಂದರು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್‌ ಶನಿವಾರ ಹೇಳಿದರು.

ಹಡಗುಗಳಿಗೆ ಪರಿಸರಸ್ನೇಹಿ ಇಂಧನ ಬಳಸುವ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತೀಯ ಪಾಲುದಾರರೊಡನೆ ಕೊಚ್ಚಿನ್‌ ಶಿಪ್‌ಯಾರ್ಡ್‌ ಸಂಸ್ಥೆಯು ಈ ಎಲೆಕ್ಟಿಕ್‌ ಹಡಗುಗಳನ್ನು ಅಭಿವೃದ್ಧಿಪಡಿಸಲಿದೆ’ ಎಂದಿದ್ದಾರೆ.

ಜಲಜನಕ ಆಧಾರಿಕ ಎಲೆಕ್ಟ್ರಿಕ್‌ ಹಡುಗಳ ನಿರ್ಮಾಣ ಕುರಿತ ಭಾರತದ ಸರ್ಕಾರದ ಯೋಜನೆಯನ್ನು ಸಚಿವರು ಅನಾವರಣಗೊಳಿಸಿದರು.

ADVERTISEMENT

‘ಕೊಚ್ಚಿನ್‌ ಶಿಪ್‌ಯಾರ್ಡ್‌ ಸಂಸ್ಥೆಯು ಕೆಪಿಐಟಿ ಟೆಕ್ನಾಲಾಜಿಸ್‌ ಲಿಮಿಟೆಡ್‌ ಹಾಗೂ ಜಲಜನಕ ಇಂಧನ ಕೋಶದಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.