ಹೈದರಾಬಾದ್: ಇಲ್ಲಿನ ಬಾಡಿಗೆ ತಾಯ್ತನ ಮತ್ತು ಅಂಡಾಣು ಮಾರಾಟ ಕೇಂದ್ರವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ನಡೆಯುತ್ತಿದ್ದ ಕೃತಕ ಗರ್ಭಧಾರಣೆಯ (ಐವಿಎಫ್) ಬೃಹತ್ ಜಾಲವನ್ನು ಭೇದಿಸಿದ್ದಾರೆ.
ಏಳು ಮಹಿಳೆಯರು ಸೇರಿಕೊಂಡು ನಗರದ ಕೆಲವು ಕೃತಕ ಗರ್ಭಧಾರಣೆ ಕೇಂದ್ರಗಳ ಸಹಕಾರದಲ್ಲಿ ಈ ಕೇಂದ್ರ ನಡೆಸುತ್ತಿದ್ದರು. ಇತ್ತೀಚೆಗೆ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸೃಷ್ಟಿ ಐವಿಎಫ್ ಕ್ಲಿನಿಕ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ, ಈ ಅಕ್ರಮ ಜಾಲ ಬಹಿರಂಗಗೊಂಡಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಎನ್. ಲಕ್ಷ್ಮಿ ರೆಡ್ಡಿ, ಈ ಹಿಂದೆ ಅಂಡಾಣು ದಾನಿಯಾಗಿ ಹಾಗೂ ಬಾಡಿಗೆ ತಾಯಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಅನುಭವ ಇಟ್ಟುಕೊಂಡು ಅಕ್ರಮವಾಗಿ ಹಣ ಗಳಿಸಲು ಮಧ್ಯವರ್ತಿಗಳ ಮೂಲಕ ಐವಿಎಫ್ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸಿ ವ್ಯವಹಾರ ನಡೆಸುತ್ತಿದ್ದರು. ಇದಕ್ಕಾಗಿ ಬಾಡಿಗೆ ತಾಯಂದಿರನ್ನು ಮತ್ತು ಅಂಡಾಣು ದಾನಿಗಳನ್ನು ನೇಮಿಸಿಕೊಂಡು, ಅವರನ್ನು ಐವಿಎಫ್ ಕೇಂದ್ರಗಳಿಗೆ ಪೂರೈಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.