ADVERTISEMENT

ವಿಎಚ್‌ಪಿ ಮುಖಂಡನ ಮೇಲೆ ಹಲ್ಲೆ ವದಂತಿ, ಉದ್ವಿಗ್ನ ಸ್ಥಿತಿ

ಪಿಟಿಐ
Published 12 ಮೇ 2022, 10:41 IST
Last Updated 12 ಮೇ 2022, 10:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹನುಮಾನ್‌ಘರ್, ರಾಜಸ್ಥಾನ: ಜಿಲ್ಲೆಯ ನೋಹರ್ ಪಟ್ಟಣದಲ್ಲಿ ವಿಎಚ್‌ಪಿ ನಾಯಕರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ.

ಘಟನೆ ಕುರಿತಂತೆ ವದಂತಿ ಹರಡುವುದನ್ನು ತಪ್ಪಿಸಲು ಮುಂಜಾಗ್ರತೆಯಾಗಿ ನೋಹರ್‌, ಭದ್ರಾ, ರಾವತ್‌ಸರ್ ಪಟ್ಟಣಗಳಲ್ಲಿ ಮೊಬೈಲ್ ಇಂಟರ್‌ನೆಟ್‌ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.

ವಿಎಚ್‌ಪಿ ನಾಯಕ ಸತ್ವೀರ್ ಸಹರಣ್‌ ಮೇಲೆ ಬುಧವಾರ ಸಂಜೆ ಗುಂಪು ದಾಳಿ ನಡೆದಿತ್ತು. ದೇಗುಲದ ಪಕ್ಕದ ಖಾಲಿ ಸ್ಥಳದಲ್ಲಿ ಗುಂಪು ಕುಳಿತಿದ್ದು, ಗಲಾಟೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದು ಹಲ್ಲೆಗೆ ಕಾರಣವೆನ್ನಲಾಗಿದೆ.

ADVERTISEMENT

ಅಲ್ಪಸಂಖ್ಯಾತ ಸಮುದಾಯದ ಗುಂಪು ದಾಳಿ ನಡೆಸಿದೆ ಎಂಬ ವದಂತಿ ಹಬ್ಬುತ್ತಿದಂತೆಯೇ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮುಂಜಾಗ್ರತೆಯಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.